alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ಶಶಿಕಲಾ

ಬೆಂಗಳೂರು: ಚೆನ್ನೈ ಆಸ್ಪತ್ರೆಯಲ್ಲಿ ಪತಿ ನಟರಾಜನ್ ಮಾರುತಪ್ಪ(74) ಅವರು ನಿಧನರಾಗಿರುವ ಸುದ್ದಿ ತಿಳಿದ ವಿ.ಕೆ. ಶಶಿಕಲಾ ಕುಸಿದು ಬಿದ್ದಿದ್ದಾರೆ.

ಅನಾರೋಗ್ಯದ ಕಾರಣ ನಟರಾಜನ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಪೆರೋಲ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಅರ್ಜಿ ಸಲ್ಲಿಸಿರಲಿಲ್ಲ. ತಡರಾತ್ರಿ ನಟರಾಜನ್ ನಿಧನರಾಗಿರುವ ಸುದ್ದಿ ತಿಳಿದ ಶಶಿಕಲಾ ಕುಸಿದು ಬಿದ್ದಿದ್ದಾರೆ.

ಬೆಳಿಗ್ಗೆ 8.30 ರ ಬಳಿಕ ಅವರು ಪೆರೋಲ್ ಗೆ ಅರ್ಜಿ ಸಲ್ಲಿಸಲಿದ್ದು, ಮಾಹಿತಿ ದೃಢಪಡಿಸಿಕೊಂಡು ಅವರನ್ನು ಜೈಲಿನ ಸಿಬ್ಬಂದಿ ಕಳುಹಿಸಿಕೊಡಲಿದ್ದಾರೆ. ತುರ್ತು ಪೆರೋಲ್ ಪ್ರಕ್ರಿಯೆ ಪೂರ್ಣಗೊಳಿಸಿ ಶಶಿಕಲಾ 11 ಗಂಟೆ ಸುಮಾರಿಗೆ ಚೆನ್ನೈನತ್ತ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಚೆನ್ನೈನ ನಿವಾಸಕ್ಕೆ ನಟರಾಜನ್ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...