alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲೂಫಿಲಂ ತೋರಿಸಿ ಅಸಹಜ ಸೆಕ್ಸ್ ಗೆ ಬಲವಂತ

ಬೆಂಗಳೂರು: ಪತ್ನಿಗೆ ಬ್ಲೂ ಫಿಲಂ ತೋರಿಸಿ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ವೈದ್ಯನೊಬ್ಬ ಬಲವಂತ ಮಾಡಿದ್ದಲ್ಲದೇ, ತನ್ನ ತಂದೆಯೊಂದಿಗೂ ಮಲಗುವಂತೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವೈದ್ಯನ ಮದುವೆಯಾಗಿ 3 ವರ್ಷಗಳಾಗಿವೆ. ಆದರೆ, ಮದುವೆಯಾಗಿ 3 ತಿಂಗಳಲ್ಲೇ ಆತನ ನಿಜ ಬಣ್ಣ ಬಯಲಾಗಿದೆ.

ಮದುವೆಯಾಗಿ 3 ತಿಂಗಳಾದ್ರೂ ಮಕ್ಕಳಾಗುವ ಕುರಿತು ಸಿಹಿ ಸುದ್ದಿ ನೀಡಲಿಲ್ಲ ಎಂದು ಪತ್ನಿಗೆ ಕಿರುಕುಳ ನೀಡಲಾರಂಭಿಸಿದ ಪತಿ, ಬ್ಲೂ ಫಿಲಂ ತೋರಿಸಿ ಪತ್ನಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದಾನೆ.

ಅಲ್ಲದೇ, ತನ್ನ ತಂದೆಯೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆಯೂ ಒತ್ತಾಯಿಸಿದ್ದಾನೆ. ಹೇಳಿದಂತೆ ಕೇಳದಿದ್ದರೆ, ಲೈಂಗಿಕ ಕ್ರಿಯೆಯ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ಇದರೊಂದಿಗೆ ವರದಕ್ಷಿಣೆಗಾಗಿ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ್ದರೂ, ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...