alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಗಿಲನ್ನು ತೆಗೆಯಲಾಗದಷ್ಟು ಗಾಢ ನಿದ್ದೆಯಲ್ಲಿದ್ದ ಬಾಲಕಿಯನ್ನು ಎಬ್ಬಿಸಿದ ಅಗ್ನಿಶಾಮಕ ಸಿಬ್ಬಂದಿ

ಬಾಗಿಲನ್ನು ತೆರೆಯಲು ಆಗದಷ್ಟು ನಿದ್ದೆಯಲ್ಲಿದ್ದ ಬಾಲಕಿಯನ್ನು ಅಗ್ನಿಶಾಮಕದಳ ಸಿಬ್ಬಂದಿ ಎಬ್ಬಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಬಿಜೈನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, 12 ವರ್ಷದ ಬಾಲಕಿ ಮನೆಯಲ್ಲಿ ಬಾಗಿಲಿಗೆ ಚಿಲಕ ಹಾಕಿ ಗಾಢ ನಿದ್ರೆಗೆ ಜಾರಿದ್ದಾಳೆ. ಕೆಲಸದ ನಿಮಿತ್ತ ಹೊರಹೋಗಿದ್ದ ತಂದೆ, ತಾಯಿ ಮನೆಗೆ ಬಂದ ಬಳಿಕ ಎಷ್ಟು ಬಾಗಿಲು ಬಡಿದರೂ ಬಾಲಕಿಗೆ ಎಚ್ಚರವಾಗಿಲ್ಲ.

ಇದರಿಂದ ಗಾಬರಿಗೊಂಡ ಪಾಲಕರು, ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ನಾಲ್ಕನೇ ಮಹಡಿಯಲ್ಲಿದ್ದ ಅಪಾರ್ಟ್ಮೆಂಟಿನ ಹಿಂದಿನ ದ್ವಾರದಿಂದ ಪ್ರವೇಶ ಪಡೆದು ಬಾಗಿಲನ್ನು ತೆಗೆದಿದ್ದಾರೆ. ನಂತರ ಪಾಲಕರು ಮನೆಯನ್ನು ಪ್ರವೇಶಿಸಿ ಬಾಲಕಿಯನ್ನು ಎಚ್ಚರಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...