alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮೇಲೆಯೇ ನೀಚ ಕೃತ್ಯವೆಸಗಿದ ಕಿರಾತಕ

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿ ಮೇಲೆಯೇ ವ್ಯಕ್ತಿಯೊಬ್ಬ ಬಲವಂತವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದು, ನೊಂದ ಮಹಿಳೆ ಬಸವೇಶ್ವರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

2009 ರಲ್ಲಿ ಮದುವೆಯಾಗಿರುವ ದಂಪತಿ ಮೊದಲಿಗೆ ಅನ್ಯೋನ್ಯವಾಗಿಯೇ ಇದ್ದರು. ಗೊರಗುಂಟೆ ಪಾಳ್ಯದಲ್ಲಿ ಮೆಕಾನಿಕ್ ಆಗಿರುವ ವ್ಯಕ್ತಿಗೆ ಮದುವೆಯ ಸಂದರ್ಭದಲ್ಲಿ 2.20 ಲಕ್ಷ ರೂ. ನಗದು ಹಾಗೂ 40 ಗ್ರಾಂ ಚಿನ್ನವನ್ನು ನೀಡಲಾಗಿತ್ತು. ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ ಪತಿ ಖರ್ಚಿಗೆ ಹಣವನ್ನು ಕೊಡುತ್ತಿರಲಿಲ್ಲ. ದುಡಿದ ಹಣವನ್ನೆಲ್ಲಾ ಬೇರೆ ಹೆಂಗಸರಿಗಾಗಿ ಖರ್ಚು ಮಾಡುತ್ತಿದ್ದ.

ಇತ್ತೀಚೆಗೆ ಆತ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿ ಪತ್ನಿ ಜಗಳವಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಪತಿ, ಪತ್ನಿ ಮೇಲೆ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಕೊಲೆ ಬೆದರಿಕೆ ಹಾಕಿದ್ದಾನೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...