alex Certify
ಕನ್ನಡ ದುನಿಯಾ       Mobile App
       

Kannada Duniya

ಕೊರಿಯರ್ ಕೊಡಲು ಬಂದವನಿಂದ ನೀಚ ಕೃತ್ಯ

ಬೆಂಗಳೂರು: ಕೊರಿಯರ್ ಕೊಡಲು ಬಂದಿದ್ದ ಯುವಕನೊಬ್ಬ, ಯುವತಿಯರ ಎದುರು ಪ್ಯಾಂಟ್ ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜಯನಗರದ 7 ನೇ ಹಂತದಲ್ಲಿ ಫ್ಯಾಷನ್ ಡಿಸೈನಿಂಗ್ ಓದುತ್ತಿರುವ ಉತ್ತರ ಭಾರತ ಮೂಲದ ಯುವತಿ ಹಾಗೂ ಖಾಸಗಿ ಕಂಪನಿಯೊಂದರ ಉದ್ಯೋಗಿ ವಾಸವಾಗಿದ್ದು, ನವೆಂಬರ್ 23 ರಂದು ಕೊರಿಯರ್ ಕೊಡಲು ಯುವಕನೊಬ್ಬ ಬಂದಿದ್ದಾನೆ.

ಆದರೆ, ಆತ ತಪ್ಪು ವಿಳಾಸಕ್ಕೆ ಬಂದಿದ್ದು ಗೊತ್ತಾಗಿ ವಾಪಸ್ ಆಗಿದ್ದಾನೆ. ಕೆಲ ಸಮಯದ ಬಳಿಕ ಮತ್ತೆ ಬಂದು ಬಾಗಿಲು ಬಡಿದ ಕೊರಿಯರ್ ಬಾಯ್, ಯುವತಿ ಬಾಗಿಲು ತೆರೆಯುತ್ತಿದ್ದಂತೆ ಒಳಗೆ ಬರಬಹುದೆ ಎಂದು ಸನ್ನೆ ಮಾಡಿದ್ದಲ್ಲದೇ, ಪ್ಯಾಂಟ್ ಜಿಪ್ ತೆಗೆದು ಅಸಭ್ಯ ವರ್ತನೆ ತೋರಿದ್ದಾನೆ.

ಒಂದೆರಡು ದಿನಗಳ ಬಳಿಕ ಮತ್ತೆ ಬಂದು ಇದೇ ರೀತಿ ಅನುಚಿತವಾಗಿ ವರ್ತಿಸಿದ್ದಾನೆ. ಕಾಮುಕ ಕೊರಿಯರ್ ಬಾಯ್ ಕಾಟದಿಂದ ರೋಸಿ ಹೋದ ಯುವತಿಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನಶಂಕರಿ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದು, ಕಾಮುಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...