alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈ ಕಳ್ಳನ ಸ್ಟೋರಿ

A burglar trying to get into a house by the backdoor

ಬೆಂಗಳೂರು: ಕಳ್ಳತನ ಮಾಡುವುದು ಕೆಲವರಿಗೆ ಶೋಕಿ, ಮತ್ತೆ ಕೆಲವರಿಗೆ ಹೊಟ್ಟೆಪಾಡು. ಇನ್ನೂ ಕೆಲವರಿಗೆ ಏನೇನೋ ಕಾರಣಗಳಿರುತ್ತವೆ. ಇಲ್ಲೊಬ್ಬ ಕಳ್ಳ ಮಾಡಿರುವ ಕೃತ್ಯವನ್ನು ಗಮನಿಸಿದರೆ ನೀವು ಖಂಡಿತಾ ದಂಗಾಗುತ್ತೀರಿ.

ಗುಜರಾತ್ ಮೂಲದ ಶಂಕರ್ ಅಲಿಯಾಸ್ ನಾವಗಾನ್ ಭಾಯ್ ಎಂಬಾತನೇ ಈ ಸ್ಟೋರಿಯ ಕೇಂದ್ರ ಬಿಂದು. ಸುಮಾರು ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಶಂಕರ್, ಕಳ್ಳತನ ಮಾಡುವುದನ್ನೇ ರೂಢಿಸಿಕೊಂಡಿದ್ದ. ತಾನು ಕಳವು ಮಾಡಿದ್ದ ಬಂಗಾರ, ಬೆಳ್ಳಿಯನ್ನು ಕರಗಿಸಿ ಅದರಿಂದ ತನ್ನ ತಂದೆ ಹಾಗೂ ಸಹೋದರನ ವಿಗ್ರಹ ಮಾಡಿಸಿದ್ದ. ತಂದೆಯ ವಿಗ್ರಹ ಪೂಜಿಸಿದರೆ, ಯಾರ ಕೈಗೂ ಸಿಕ್ಕಿ ಬೀಳುವುದಿಲ್ಲ ಎಂಬ ನಂಬಿಕೆ ಈತನದ್ದಾಗಿತ್ತು.

ತಂದೆ ಹಾಗೂ ಅಣ್ಣ ಕೂಡ ಈತನಂತೆಯೇ ಕಳ್ಳತನ ಮಾಡುತ್ತಿದ್ದರಾದರೂ, ಕಾರಣಾಂತರದಿಂದ ಅವರು ಮೃತಪಟ್ಟಿದ್ದರು. ಅವರ ಪ್ರತಿಮೆಯನ್ನು ತಾನು ಕಳವು ಮಾಡಿದ್ದ ಬಂಗಾರ, ಬೆಳ್ಳಿ ಬಳಸಿ ನಿರ್ಮಿಸಿದ್ದ ಈ ಚಾಣಾಕ್ಷ. ಬರೋಬ್ಬರಿ 100 ಕೆಜಿ ತೂಕದ ಬೆಳ್ಳಿಯಲ್ಲಿ ತಂದೆಯ ಪ್ರತಿಮೆ ಮಾಡಿಸಿದ್ದ.

ಅಲ್ಲದೇ, ಗುಜರಾತ್ ನಲ್ಲಿ ಮನೆಗಳನ್ನು ನಿರ್ಮಿಸಿ ಬಾಡಿಗೆ ಕೊಟ್ಟಿದ್ದ. ಜಲ್ಲಿ ಕ್ರಷರ್ ಹೊಂದಿದ್ದ ಎನ್ನಲಾಗಿದೆ. ಬೆಂಗಳೂರು ವಿಜಯನಗರ ಠಾಣೆ ಪೊಲೀಸರು, ತನಿಖೆ ನಡೆಸಿ, ಶಂಕರ್ ನನ್ನು ಬಂಧಿಸಿದಾಗ, ವಿಷಯ ಬೆಳಕಿಗೆ ಬಂದಿದೆ. ಆತ ಇದುವರೆಗೆ ಸುಮಾರು 3 ಕೋಟಿ ರೂ. ಮೌಲ್ಯದ ವಸ್ತು ಕಳವು ಮಾಡಿದ್ದು, ಸದ್ಯ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...