alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನೆರವಿನಿಂದ ಮನೆ ಸೇರಿದ ಬಾಲಕಿ

ಬೆಂಗಳೂರು: ಮನೆ ಬಿಟ್ಟು ಬಂದಿದ್ದ ಬಾಲಕಿ ಫೇಸ್ ಬುಕ್ ಹಾಗೂ ಪೊಲೀಸರ ನೆರವಿನಿಂದ ಮರಳಿ ಮನೆ ಸೇರಿದ ಪ್ರಕರಣ ನಡೆದಿದೆ.

ಬೆಂಗಳೂರು ವಿಜಯನಗರ ಬಸ್ ನಿಲ್ದಾಣದಲ್ಲಿ ನಿನ್ನೆ 10 ವರ್ಷದ ಬಾಲಕಿಯನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಕೆಯನ್ನು ಕರೆತಂದ ಪೊಲೀಸರು ವಿಳಾಸ ಕೇಳಿದಾಗ, ಸರಿಯಾದ ಮಾಹಿತಿ ನೀಡಿಲ್ಲ. ಆಕೆಯ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಪೊಲೀಸರು, ಬಾಲಕಿಯ ಮಾಹಿತಿ ಇದ್ದರೆ ನೀಡುವಂತೆ ಮನವಿ ಮಾಡಿದ್ದಾರೆ. ಇದು ಪೋಷಕರಿಗೆ ಗೊತ್ತಾಗಿ ಠಾಣೆಗೆ ಬಂದು ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ.

ಪೋಷಕರು ಮನೆಯಲ್ಲಿ ಜಗಳವಾಡಿದ್ದರಿಂದ ನೊಂದ ಬಾಲಕಿ ಅಜ್ಜಿ ಮನೆಗೆ ಹೋಗಲು ಮನೆ ಬಿಟ್ಟು ಬಂದಿದ್ದಾಳೆ.

ಆದರೆ, ವಿಜಯನಗರದಲ್ಲಿ ಆಕೆ ದಾರಿ ತಪ್ಪಿದ್ದು, ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಫೇಸ್ ಬುಕ್ ನಲ್ಲಿ ಬಾಲಕಿಯನ್ನು ನೋಡಿದ್ದ ನೆರೆಹೊರೆಯವರು ಪೋಷಕರಿಗೆ ಮಾಹಿತಿ ನೀಡಿದ್ದು, ಠಾಣೆಗೆ ಆಗಮಿಸಿದ ಪೋಷಕರು ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು, ಫೇಸ್ ಬುಕ್ ಹಾಗೂ ಸಾರ್ವಜನಿಕರ ಸಹಾಯದಿಂದ ಬಾಲಕಿ ಮತ್ತೆ ಮನೆ ಸೇರಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...