alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರ ಪ್ರಾಣಕ್ಕೆ ಕಂಟಕವಾಯ್ತು ನಾಯಿಯ ಸಾವು

ಪ್ರೀತಿಯಿಂದ ಸಾಕಿದ ನಾಯಿ ಮೃತಪಟ್ಟಿದ್ರಿಂದ ನೊಂದು ಬೆಂಗಳೂರಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸ್ನೇಹಿತ ಕೂಡ ಸಾವಿನ ಮನೆ ಸೇರಿದ್ದಾನೆ.

19 ವರ್ಷದ ಯುವತಿ ಸಿ.ಗಾಮಿನಿ ತಂದೆ-ತಾಯಿಗೆ ಒಬ್ಬಳೇ ಮಗಳು. ಅಶ್ವತ್ಥ ನಗರದಲ್ಲಿ ವಾಸಿಸ್ತಾ ಇದ್ಲು. ಆರ್ ಪಿ ಎ ಕಾಲೇಜಿನಲ್ಲಿ ಬಿಕಾಂ ಓದ್ತಾ ಇದ್ದ ಗಾಮಿನಿಗೆ, ಪಾಮೆರಿಯನ್ ನಾಯಿ ಜಿಮ್ಮಿ ಅಂದ್ರೆ ಪಂಚಪ್ರಾಣ. ನಾಲ್ಕು ವರ್ಷಗಳಿಂದ ಗಾಮಿನಿ ಆ ನಾಯಿಯನ್ನು ಮುದ್ದಾಗಿ ಸಾಕಿದ್ಲು. ಆದ್ರೆ ಜುಲೈನಲ್ಲಿ ಅನಾರೋಗ್ಯದಿಂದ ಜಿಮ್ಮಿ ಮೃತಪಟ್ಟಿದೆ. ಜಿಮ್ಮಿ ಸಾವಿನ ನಂತರ ಗಾಮಿನಿಗೆ ಖಿನ್ನತೆ ಆವರಿಸಿತ್ತು.

ಆ ನೋವಿನಿಂದ ಯುವತಿ ಹೊರಬಂದಿರಲಿಲ್ಲ. ಕಳೆದ ವಾರ ಚಿಕ್ಕಸ್ವಾಮಿ ಹಾಗೂ ವಿಜಯಲಕ್ಷ್ಮಿ ದಂಪತಿ ಮತ್ತೊಂದು ನಾಯಿಮರಿಯನ್ನು ತಂದಿದ್ರು, ಅದಕ್ಕೂ ಜಿಮ್ಮಿ ಅಂತಾ ಹೆಸರಿಟ್ಟಿದ್ರು. ಆದ್ರೂ ಗಾಮಿನಿಗೆ ಸಮಾಧಾನವಾಗಿರಲಿಲ್ಲ. ಮನೆಯ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆಕೆ ಸಾವನ್ನಪ್ಪಿದ್ದಾಳೆ.

ಇದಾಗಿ ಕೆಲವೇ ಗಂಟೆಗಳ ನಂತರ ಆಕೆಯ ಸ್ನೇಹಿತ ಬಿನ್ನಿಮಿಲ್ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಮಿನಿ ಸಾವಿನಿಂದ ನೊಂದು ಯುವಕ ದುಡುಕಿದ್ದಾನೆ ಅಂತಾ ಹೇಳಲಾಗ್ತಿದೆ. ಆದ್ರೆ ಆ ಯುವಕ ಗಾಮಿನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೂಡ ಕೇಳಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...