alex Certify
ಕನ್ನಡ ದುನಿಯಾ       Mobile App
       

Kannada Duniya

ರೌಡಿ ಶೀಟರ್ ಗಳ ಮೇಲೆ ಫೈರಿಂಗ್

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಇಬ್ಬರು ರೌಡಿಶೀಟರ್ ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ತರಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ 80 ಅಡಿ ರಸ್ತೆಯಲ್ಲಿ ರೌಡಿಶೀಟರ್ ಪರಮೇಶ್, ಆತನ ಸಹಚರ ಸಂತೋಷ್ ಮೇಲೆ ಫೈರಿಂಗ್ ಮಾಡಲಾಗಿದೆ. ಕೊಲೆ, ಸುಲಿಗೆ ಹಲ್ಲೆ ಸೇರಿ 9 ಪ್ರಕರಣಗಳಲ್ಲಿ ಇವರು ಬೇಕಾಗಿದ್ದರು.

ಬೆಳಿಗ್ಗೆ ಪರಮೇಶ್ ಬಂಧನಕ್ಕೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿದ್ದು, ಮುಖ್ಯಪೇದೆ ಸುರೇಶ್, ಪೇದೆ ನೇಮಿನಾಥ್ ಅವರು ಗಾಯಗೊಂಡಿದ್ದಾರೆ.

ಆಗ, ಆತ್ಮರಕ್ಷಣೆಗಾಗಿ ಪಿ.ಐ. ತಿಪ್ಪೇಸ್ವಾಮಿ, ಪಿ.ಎಸ್.ಐ. ಶಿವಕುಮಾರ್ ಫೈರಿಂಗ್ ಮಾಡಿದ್ದಾರೆ. ಪರಮೇಶ್ ಮತ್ತು ಸಂತೋಷ್ ಮೇಲೆ ಫೈರಿಂಗ್ ಮಾಡಲಾಗಿದ್ದು, ಗಾಯಗೊಂಡ ಅವರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳು ಪೊಲೀಸರನ್ನು ಕೂಡ ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...