alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಂಡ ಹಾಯುವಾಗ ಆಯತಪ್ಪಿ ಬಿದ್ದ ಮಹಿಳೆ

ಬೆಂಗಳೂರು: ಕೆಂಡ ಹಾಯುವಾಗ ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಟಿ.ದಾಸರಹಳ್ಳಿ ಸಮೀಪದ ಬಾಗಲಗುಂಟೆಯಲ್ಲಿ ನಡೆದಿದೆ.

ಬಾಗಲುಗುಂಟೆ ಗ್ರಾಮದೇವತೆ ಜಾತ್ರೆಯಲ್ಲಿ ಕೆಂಡಾರ್ಚನೆ ಏರ್ಪಡಿಸಲಾಗಿದ್ದು, ಪೂಜೆ ಪುನಸ್ಕಾರ ಸಲ್ಲಿಸಿದ ಬಳಿಕ, ಕೆಂಡ ಹಾಯಲು ಸಿದ್ಧತೆ ಮಾಡಿಕೊಂಡಿದ್ದ ಸ್ಥಳದಲ್ಲಿ ಜನರೆಲ್ಲಾ ಸೇರಿದ್ದಾರೆ.

ದೇವರನ್ನು ಹೊತ್ತವರು ಕೆಂಡ ಹಾಯ್ದ ನಂತರ, ಭಕ್ತರು ಕೆಂಡ ಹಾಯಲು ಅವಕಾಶ ಮಾಡಿಕೊಡಲಾಗಿದೆ. ಕೆಂಡದ ಮೇಲೆ ನಡೆಯುವಾಗ 45 ವರ್ಷ ವಯಸ್ಸಿನ ಮಹಿಳೆ ಆಯತಪ್ಪಿ ಬಿದ್ದಿದ್ದಾರೆ. ಕೂಡಲೇ ಸಮೀಪದಲ್ಲಿದ್ದವರು ಮಹಿಳೆಯನ್ನು ಕೆಂಡದ ಮೇಲಿನಿಂದ ಹೊರಕ್ಕೆ ಎಳೆದುಕೊಂಡಿದ್ದಾರೆ.

ಮಹಿಳೆಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಇದೇ ಜಾತ್ರೆಯಲ್ಲಿ 2015 ರ ನವೆಂಬರ್ 4 ರಂದು ಕಳಶ ಹೊತ್ತು ಸಾಗುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...