alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಹೊರವಲಯದಲ್ಲಿ ಆನೆಗಳ ಓಡಿಸಲು ಹರಸಾಹಸ

ಬೆಂಗಳೂರು: ಬೆಂಗಳೂರು ಹೊರವಲಯದ ಮೈಸೂರು ಹೆದ್ದಾರಿ ಬಳಿ 2 ಕಾಡಾನೆಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರು  – ಮೈಸೂರು ಹೆದ್ದಾರಿ ಸಮೀಪದ ಅಂಚೆಪಾಳ್ಯ, ಕಂಬಿಪುರ, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಬಳಿ 2 ಕಾಡಾನೆಗಳು ಓಡಾಡಿಕೊಂಡಿದ್ದು, ಇವುಗಳನ್ನು ಕಂಡವರು ಕುಂಬಳಗೋಡು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಮನಗರ, ಕಗ್ಗಲೀಪುರ ಅರಣ್ಯ ಇಲಾಖೆಯ 40 ಕ್ಕೂ ಅಧಿಕ ಸಿಬ್ಬಂದಿ ಆನೆಗಳನ್ನು ಓಡಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಆನೆಗಳು ದಟ್ಟ ಪೊದೆಯಲ್ಲಿ ಅಡಗಿಕೊಂಡಿದ್ದು, ಅವುಗಳ ಪತ್ತೆಗೆ ದ್ರೋಣ್ ಕ್ಯಾಮೆರಾ ಬಳಸಲಾಗ್ತಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದ ಅರಣ್ಯ ಪ್ರದೇಶದಿಂದ ಈ ಕಾಡಾನೆಗಳು ಬಂದಿರಬಹುದೆಂದು ಹೇಳಲಾಗಿದ್ದು, ಸುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.

ಆನೆಗಳು ಹೆದ್ದಾರಿ ಪ್ರವೇಶಿಸಿದರೆ, ವಾಹನ ಸಂಚಾರಕ್ಕೆ ಅಡ್ಡಿಯಾಗಲಿರುವ ಹಿನ್ನಲೆಯಲ್ಲಿ ಅವುಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...