alex Certify
ಕನ್ನಡ ದುನಿಯಾ       Mobile App
       

Kannada Duniya

ಪಾದಯಾತ್ರೆ ಮೂಲಕ ಹಜ್ ಯಾತ್ರೆ

mohd rahmathullah khan

ಬೆಂಗಳೂರಿನ 56 ವರ್ಷದ ವ್ಯಕ್ತಿಯೊಬ್ಬರು ಪಾದಯಾತ್ರೆ ಮೂಲಕ ಹಜ್ ಯಾತ್ರೆ ಕೈಗೊಂಡಿದ್ದು, ಅಂದಾಜು 7 ಸಾವಿರ ಕಿಲೋಮೀಟರ್ ದೂರವನ್ನು ಈ ಸಂದರ್ಭದಲ್ಲಿ ಅವರು ಕ್ರಮಿಸಲಿದ್ದಾರೆ.

ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಮಹಮ್ಮದ್ ರಹಮತ್ ಉಲ್ಲಾ ಖಾನ್ ಫೆಬ್ರವರಿ 5 ರಂದು ಬೆಂಗಳೂರಿನಿಂದ ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ದು, ಈಗಾಗಲೇ ತೆಲಂಗಾಣದ ಆದಿಲಾಬಾದ್ ತಲುಪಿದ್ದಾರೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6-30 ರವರೆಗೆ ಪ್ರತಿ ದಿನ 50 ರಿಂದ 60 ಕಿ.ಮೀ. ದೂರವನ್ನು ಇವರು ಕ್ರಮಿಸುತ್ತಿದ್ದಾರೆ. ಆಗಸ್ಟ್ ಕೊನೆ ವಾರದಲ್ಲಿ ಮೆಕ್ಕಾ ತಲುಪುವ ಗುರಿ ಹೊಂದಿರುವ ಅವರು, ಗಡಿ ದಾಟುವ ವೇಳೆ ತಮಗೆ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...