alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿಯಲ್ಲಿ ಸೆರೆಯಾಯ್ತು ಸಾವಿನ ದೃಶ್ಯ

ಬೆಂಗಳೂರು: ನೀರಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ದುರಂತವಾಗಿ ಸಾವು ಕಂಡ ಘಟನೆ, ರಾಮನಗರ ಜಿಲ್ಲೆ ಕನಕಪುರ ಸಮೀಪದ ರಾಮಗೊಂಡ್ಲು ಕಲ್ಯಾಣಿಯಲ್ಲಿ ನಡೆದಿದೆ.

ಬೆಂಗಳೂರು ಜಯನಗರ ನ್ಯಾಷನಲ್ ಕಾಲೇಜ್ ನ 17 ವರ್ಷದ ವಿದ್ಯಾರ್ಥಿ ವಿಶ್ವಾಸ್ ಮೃತಪಟ್ಟವರು. ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುವಾಗಲೇ ಹಿಂಭಾಗದಲ್ಲಿ ಅವರು ಮುಳುಗಿ ಸಾವನ್ನಪ್ಪಿದ್ದಾರೆ.

ಕಾಲೇಜಿನ ಎನ್.ಸಿ.ಸಿ. ಘಟಕದ ವತಿಯಿಂದ ವಿದ್ಯಾರ್ಥಿಗಳನ್ನು ಕ್ಯಾಂಪ್ ಗೆ ಕರೆದುಕೊಂಡು ಹೋಗಿದ್ದು, ಕಲ್ಯಾಣಿಯಲ್ಲಿ ಈಜಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ನೀರನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳುವ ವೇಳೆ ಹಿಂಬದಿ ಇದ್ದ ವಿಶ್ವಾಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದ ಆತನ ಸ್ನೇಹಿತರಿಗೆ ಇದು ಗೊತ್ತಾಗಿಲ್ಲ. ಫೋಟೋದಲ್ಲಿ ಆತ ನೀರಿನಲ್ಲಿ ಮುಳುಗಿದ ದೃಶ್ಯ ಸೆರೆಯಾಗಿದೆ.

ಕಾಲೇಜಿನ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದಾಗಿ ವಿಶ್ವಾಸ್ ಮೃತಪಟ್ಟಿದ್ದು, ನ್ಯಾಯ ದೊರಕಿಸಿಕೊಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...