alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ.ಗೆ ತುಂಬಬೇಕಿದ್ದ ಹಣದ ಸಮೇತ ಚಾಲಕ ಪರಾರಿ

2000-r-dd

ಬೆಂಗಳೂರು: ಎ.ಟಿ.ಎಂ.ಗಳಿಗೆ ತುಂಬಬೇಕಿದ್ದ ಹಣದ ಸಮೇತ ಚಾಲಕನೊಬ್ಬ ಪರಾರಿಯಾದ ಘಟನೆ ನಗರದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.

ಅದೇ ಮಾದರಿಯ ಘಟನೆ ಮತ್ತೆ ಮರುಕಳಿಸಿದೆ. ಸೆಕ್ಯೂರ್ ವಾಲ್ಯೂ ಇಂಡಿಯಾ ಸಂಸ್ಥೆಗೆ ಸೇರಿದ 20 ಲಕ್ಷ ರೂಪಾಯಿಯನ್ನು ವಾಹನ ಸಮೇತ ಚಾಲಕ ಕೊಂಡೊಯ್ದಿದ್ದು, ಹಣ ಹಾಗೂ ವಾಹನವನ್ನು ಪ್ರತ್ಯೇಕ ಸ್ಥಳದಲ್ಲಿ ಬಿಟ್ಟು ನಾಪತ್ತೆಯಾಗಿದ್ದಾನೆ.

ಸೆಕ್ಯೂರ್ ವ್ಯಾಲ್ಯೂ ಸಂಸ್ಥೆಯ ವಾಹನದಲ್ಲಿ ಸಿಬ್ಬಂದಿ 52 ಲಕ್ಷ ರೂ. ಹಣವನ್ನು ವಿವಿಧ ಎ.ಟಿ.ಎಂ. ಗಳಿಗೆ ತುಂಬಲು ಮಡಿವಾಳ ಕಚೇರಿಯಿಂದ ಹೊರಟಿದ್ದಾರೆ.

ಕೋರಮಂಗಲದಲ್ಲಿ ಎ.ಟಿ.ಎಂ.ಗೆ ಹಣ ತುಂಬಿ, ಓಲ್ಡ್ ಏರ್ ಪೋರ್ಟ್ ಬಳಿ 2 ಎ.ಟಿ.ಎಂ.ಗಳಿಗೆ ಹಣ ತುಂಬಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ 20 ಲಕ್ಷ ರೂ. ಸಮೇತ ಚಾಲಕ ಅಸ್ಸಾಂ ಮೂಲದ ಸಿಬ್ಬನ್ ಹುಸೇನ್ ಪರಾರಿಯಾಗಿದ್ದಾನೆ.

ಏರ್ ಪೋರ್ಟ್ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಜಿ.ಪಿ.ಆರ್.ಎಸ್. ಮೂಲಕ ವಾಹನ ಪತ್ತೆಯಾಗಿದ್ದು, ಅದರಲ್ಲಿ ಹಣ ಇರಲಿಲ್ಲ.

ಇಂದು ಮಧ್ಯಾಹ್ನ ಹೆಚ್.ಎಸ್.ಆರ್. ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಲಕ್ಷ ರೂ. ಹಣ ಇದ್ದ ಟ್ರಂಕ್ ಪತ್ತೆಯಾಗಿದೆ. ಆದರೆ, ಚಾಲಕ ಸಿಬ್ಬನ್ ಹುಸೇನ್ ನಾಪತ್ತೆಯಾಗಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...