alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಸ್ನೇಹಿತನಿಂದಲೇ ಬಲಾತ್ಕಾರ

ಬೆಂಗಳೂರು: ಪಾರ್ಟಿಗೆ ಬರುವಂತೆ ಮಹಿಳೆಗೆ ಆಹ್ವಾನಿಸಿ, ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.

ಭುವನೇಶ್ವರದಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಹೆಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಮಹಿಳೆಗೆ ಕರೆ ಮಾಡಿದ್ದ ಸ್ನೇಹಿತ ಹಿಮಾಂಶು ಭಟ್, ಭಾವನ ಬರ್ತಡೇ ಪಾರ್ಟಿಗೆ ಬರುವಂತೆ ಆಹ್ವಾನಿಸಿದ್ದಾನೆ. ಹೆಚ್.ಎಸ್.ಆರ್. ಲೇಔಟ್ ನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಮಹಿಳೆ, ಆಕೆಯ ಸ್ನೇಹಿತ ಹಿಮಾಂಶು ಭಟ್, ಹಿಮಾಂಶು ಭಟ್ ಭಾವ, ಸಹೋದರಿ, ಸ್ನೇಹಿತ ರವಿರಂಜನ್ ಅವರು ಪಾರ್ಟಿ ಮಾಡಿದ್ದಾರೆ.

ಪಾರ್ಟಿಯಲ್ಲಿ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಇದೇ ವೇಳೆ ಹಿಮಾಂಶು ಭಟ್ ಭಾವ ಬಿದ್ದು ಪೆಟ್ಟು ಮಾಡಿಕೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ತನ್ನ ಮೊಬೈಲ್ ತೆಗೆದುಕೊಂಡು ಹೋಗಿದ್ದ ಕಾರಣ, ಸಂತ್ರಸ್ಥ ಮಹಿಳೆ ಪಾರ್ಟಿಯ ಸ್ಥಳದಲ್ಲೇ ಉಳಿದಿದ್ದಾಳೆ.

ಮೊಬೈಲ್ ತರಲು ಮಹಿಳೆಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟ ರವಿರಂಜನ್, ಬೆದರಿಕೆ ಹಾಕಿದ್ದಲ್ಲದೇ ಕ್ಯಾಬ್ ಚಾಲಕನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...