alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ವೈಭವ ಹೆಚ್ಚಿಸಲಿವೆ ಡಬ್ಬಲ್ ಡೆಕ್ಕರ್ ಬಸ್

Photographer - Stan Papior Wright London Bus Red

ಬೆಂಗಳೂರು: ಬೆಂಗಳೂರಲ್ಲಿ ಬಿ.ಎಂ.ಟಿ.ಸಿ. ಬಸ್ ಗಳಲ್ಲಿ ಧಾವಂತದಲ್ಲಿ ಓಡಾಡುವವರಿಗೆ ಹಿಂದಿನ ವೈಭವ ನೆನಪಿರಲಾರದು.

80 -90 ರ ದಶಕದಲ್ಲಿ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ ಸಂಚಾರವಿತ್ತು. ಹೊರಗಿನಿಂದ ಬಂದವರಿಗೆ ಬೆಂಗಳೂರಿನ ಅಂದವನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗಿತ್ತು.

ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ಕಾಣಸಿಗುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್ ಗಳು ಕಾಲಕ್ರಮೇಣ ಮರೆಯಾದವು. ಈಗಾಗಲೇ ಜನ ಮಾನಸದಿಂದಲೇ ಈ ಬಸ್ ಗಳು ಮರೆಯಾಗಿವೆ. ಹಿರಿಯರಿಗೆ ಮಾತ್ರ ನೆನಪಿವೆ.

ಹೊಸ ಸುದ್ದಿ ಏನೆಂದರೆ ಡಬ್ಬಲ್ ಡೆಕ್ಕರ್ ಬಸ್ ಗಳು ಮತ್ತೆ ಸಂಚರಿಸಲಿವೆ. ಹೌದು, ಬಿ.ಎಂ.ಟಿ.ಸಿ.ಯಿಂದ ಬೆಂಗಳೂರಿನ ಆಯ್ದ ಮಾರ್ಗಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪ್ರವಾಸೋದ್ಯಮದ ದೃಷ್ಠಿಯಿಂದ ಬೆಂಗಳೂರಿನಲ್ಲಿ ಮತ್ತೆ ಡಬ್ಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ. ಸದ್ಯ ದೇಶದಲ್ಲಿ ಮುಂಬೈನಲ್ಲಿ ಮಾತ್ರ ಡಬ್ಬಲ್ ಡೆಕ್ಕರ್ ಬಸ್ ಗಳ ಸಂಚಾರವಿದೆ.

ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಶೀಘ್ರವೇ ಬೆಂಗಳೂರಿನ ರಸ್ತೆಗಳಲ್ಲಿಯೂ ಡಬ್ಬಲ್ ಡೆಕ್ಕರ್ ಬಸ್ ಸಂಚಾರ ಆರಂಭವಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...