alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯರನ್ನೇ ವಿಮಾನದಿಂದ ಹೊರ ಹಾಕಿದ ಸಿಬ್ಬಂದಿ

ಲಕ್ನೋದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವೈದ್ಯರೊಬ್ಬರನ್ನು ಇಂಡಿಗೋ ವಿಮಾನದಿಂದ ಹೊರಹಾಕಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದ ಸರ್ಜನ್ ಸೌರಭ್ ರೈ ಎಂಬುವವರು ಸೋಮವಾರ ಲಕ್ನೋದಿಂದ ಬೆಂಗಳೂರಿಗೆ ಹೋಗಲು ಇಂಡಿಗೋ ಫ್ಲೈಟ್ ಹತ್ತಿದ್ದರು. ಆದರೆ ವಿಮಾನದಲ್ಲಿ ವಿಪರೀತ ಸೊಳ್ಳೆಗಳ ಕಾಟದಿಂದಾಗಿ ಸಿಬ್ಬಂದಿ ಜೊತೆಗೆ ಅಸಮಾಧಾನ ವ್ಯಕ್ತಪಡಿಸಿ, ದೂರಿದ್ದರು. ಆದರೆ ಇದಕ್ಕೆ ಸ್ಪಂದಿಸದ ಸಿಬ್ಬಂದಿ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡು, ಕೈ ಮಾಡಿ, ವಿಮಾನದಿಂದ ಹೊರಹಾಕಿದ್ದಾರೆ ಎಂದು ರೈ ಆರೋಪಿಸಿದ್ದಾರೆ.

ಆದರೆ ಇಂಡಿಗೋ ಸಿಬ್ಬಂದಿ ಹೇಳೋದೇ ಬೇರೆ. ರೈ ಬೇರೆ ಪ್ರಯಾಣಿಕರಿಗೆ ತೊಂದರೆ ಕೊಟ್ಟು ವಿಮಾನದ ಉಪಕರಣಗಳನ್ನು ಹಾಳು ಮಾಡಿದ್ದರು. ಅಲ್ಲದೇ ಅವರು ‘ಹೈಜಾಕ್’ ಎನ್ನುವ ಶಬ್ದವನ್ನು ಬಳಸಿದ್ದರಿಂದಾಗಿ ತಾವು ಅವರನ್ನು ವಿಮಾನದಿಂದ ಕೆಳಗಿಳಿಯುವಂತೆ ಹೇಳಿದೆವು ಎಂಬುದಾಗಿ ಇಂಡಿಗೋ ಸಂಸ್ಥೆ ತನ್ನ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ. ಕೆಲ ತಿಂಗಳುಗಳ ಹಿಂದೆಯೂ ಇಂಡಿಗೋ ವಿರುದ್ಧ ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...