alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಅತ್ಯಂತ ಅಗ್ಗದ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಬೆಂಗಳೂರು

ಭಾರತದಲ್ಲಿ ವಾಸಕ್ಕೆ ಅತ್ಯಂತ ಅಗ್ಗವಾದ ನಗರ ಬೆಂಗಳೂರು. ಇಡೀ ವಿಶ್ವದಲ್ಲಿ ಸಿಲಿಕಾನ್ ಸಿಟಿಗೆ 5ನೇ ಸ್ಥಾನ ಸಿಕ್ಕಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರ್ಲ್ಡ್ ವೈಡ್ ಕಾಸ್ಟ್ ಆಫ್ ಲಿವಿಂಗ್ 2018 ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.

ಒಟ್ಟು 133 ನಗರಗಳ ಪಟ್ಟಿಯಲ್ಲಿ ಬೆಂಗಳೂರು 129ನೇ ಸ್ಥಾನ ಪಡೆದಿದೆ. ವಾಸ ಯೋಗ್ಯವಾದ ನಗರಗಳ ಪೈಕಿ ಅತ್ಯಂತ ಅಗ್ಗವಾದ ಸಿಟಿ ಅಂದ್ರೆ ಸಿರಿಯಾದ ಡಮಾಸ್ಕಸ್. ಎರಡನೇ ಸ್ಥಾನ ವೆನೆಜುವೆಲಾದ ಕರಾಕಸ್ ಗೆ ದೊರೆತಿದೆ.

ಇನ್ನು ಚೆನ್ನೈ 126ನೇ ಸ್ಥಾನದಲ್ಲಿದ್ರೆ, ದೆಹಲಿ 124ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ. ಕಳೆದ 5 ವರ್ಷಗಳಿಂದ್ಲೂ ಇದು ಮೊದಲ ಸ್ಥಾನದಲ್ಲಿಯೇ ಇದೆ. 2013ರವರೆಗೆ ಟೋಕಿಯೋ ವಿಶ್ವದ ಅತ್ಯಂತ ಕಾಸ್ಟ್ಲಿ ಸಿಟಿ ಎನಿಸಿಕೊಂಡಿತ್ತು.

ದುಬಾರಿ ನಗರಗಳ ಪೈಕಿ ಪ್ಯಾರಿಸ್ ಮತ್ತು ಜುರಿಚ್ ಎರಡನೇ ಸ್ಥಾನದಲ್ಲಿವೆ.  ಹಾಂಗ್ ಕಾಂಗ್ ನಾಲ್ಕು, ಓಸ್ಲೋ ಐದು ಮತ್ತು ಜಿನೆವಾ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...