alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ದಂಪತಿ ಮೇಲೆ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ರಾಜಾಜಿನಗರ 2 ನೇ ಬ್ಲಾಕ್ ನಲ್ಲಿ ನಡೆದಿದೆ.

ಅರ್ಜುನ್, ಶಿಲ್ಪಾ ದಂಪತಿ ಹಲ್ಲೆಗೆ ಒಳಗಾದವರು. ರಾತ್ರಿ 9 ಗಂಟೆ ಸುಮಾರಿಗೆ ಕ್ಯಾಬ್ ನಲ್ಲಿ ಬಂದ ದಂಪತಿ ಮನೆ ಬಳಿ ಇಳಿದಿದ್ದಾರೆ. ಆಗ ಎದುರಿಗೆ ಬಂದ ಕಾರಿನಲ್ಲಿದ್ದ ಯುವಕರು ಜಾಗ ಬಿಡುವಂತೆ ಹೇಳಿದ್ದಾರೆ.

ಅರ್ಜುನ್ ಕ್ಯಾಬ್ ಚಾಲಕನಿಗೆ ಹಣ ಕೊಟ್ಟು ಕಳಿಸುವೆ ಎಂದು ಹೇಳಿ, ಮನೆಯೊಳಗೆ ಹೋಗಿದ್ದಾರೆ. ಅರ್ಧ ಗಂಟೆ ನಂತರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ದಾಂಧಲೆ ನಡೆಸಿ, ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ.

ಚಾಕುವಿನಿಂದ ಅರ್ಜುನ್ ಗೆ ತಿವಿದಿದ್ದು, ಗಾಯಗೊಂಡಿರುವ ಅರ್ಜುನ್ ರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶಿಲ್ಪಾ ಅವರು ರಾಜಾಜಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...