alex Certify
ಕನ್ನಡ ದುನಿಯಾ       Mobile App
       

Kannada Duniya

ಓಮಿನಿಯಲ್ಲೇ ಅಸಹಜ ಲೈಂಗಿಕ ಕ್ರಿಯೆಗೆ ಮುಂದಾದ ಕಾಮುಕ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ಕ್ರಿಕೆಟ್ ಕೋಚ್ ಒಬ್ಬ 13 ವರ್ಷದ ಬಾಲಕನೊಂದಿಗೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾನೆ.

ಬೆಂಗಳೂರು ಯಲಹಂಕ ಬಳಿಯ ಜಿ.ಕೆ.ವಿ.ಕೆ. ಮೈದಾನದಲ್ಲಿ ಕ್ರಿಕೆಟ್ ಕೋಚಿಂಗ್ ನೀಡುವ ವ್ಯಕ್ತಿಯೊಬ್ಬ ಇಂತಹ ಕೆಲಸ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

13 ವರ್ಷದ ಬಾಲಕನನ್ನು ಓಮಿನಿಯೊಳಗೆ ಕರೆದೊಯ್ದು ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದು, ಬಾಲಕ ಕಿರುಚಾಡಿದಾಗ ಪರಾರಿಯಾಗಿದ್ದಾನೆ.

2 ದಿನಗಳ ಹಿಂದೆ ತರಬೇತಿ ಮುಗಿದ ಬಳಿಕ ಮಕ್ಕಳನ್ನು ಕಳಿಸಿದ ಕೋಚ್, ಬಾಲಕನನ್ನು ಸ್ವಲ್ಪ ಹೊತ್ತು ಇರುವಂತೆ ತಿಳಿಸಿದ್ದಾನೆ. ಬಳಿಕ ಓಮಿನಿಯೊಳಗೆ ಕರೆದುಕೊಂಡು ಹೋಗಿ ಅಸಹಜ ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದು, ಬೆದರಿದ ಬಾಲಕ ಕೂಗಾಡಿ ಬಚಾವಾಗಿದ್ದಾನೆ

ಮನೆಗೆ ಬಂದ ಬಾಲಕ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಯಲಹಂಕ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲಿಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...