alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಸಂತ್ರಸ್ತರ ನೆರವಿಗೆ ವಿದ್ಯಾರ್ಥಿಗಳ ಮಾಬ್ ಡಾನ್ಸ್

ಬೆಂಗಳೂರು: ಭೀಕರ ಜಲ ಪ್ರಳಯಕ್ಕೆ ತುತ್ತಾಗಿರುವ ಕೊಡಗು ಹಾಗೂ ಕೇರಳ ಸಂತ್ರಸ್ತರ ನೆರವಿಗೆ ದೇಶ-ವಿದೇಶಗಳಿಂದಲೂ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿಗಳು ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಮಾಬ್ ಡ್ಯಾನ್ಸ್ ಮಾಡಿ ದೇಣಿಗೆ ಸಂಗ್ರಹ ಮಾಡಿದ್ದಾರೆ.

ಸೆಂಟ್ರಲ್ ಮಾಲ್ ನ ಪ್ರವೇಶ ದ್ವಾರದ ಬಳಿ ಸೇರಿದ ಕಾಲೇಜು ವಿದ್ಯಾರ್ಥಿಗಳು ಮಾಬ್ ಡ್ಯಾನ್ಸ್ ಗೆ ಹೆಜ್ಜೆ ಹಾಕಿದರು. ಜೋರಾದ ಸಂಗೀತ, ಚಪ್ಪಾಳೆಗಳ ಸದ್ದಿಗೆ ಮುಗಿಬಿದ್ದ ಜನರು ವಿದ್ಯಾರ್ಥಿಗಳ ವಿಶೇಷ ನೃತ್ಯಗಳನ್ನು ನೋಡಿ ಸಂತಸಪಟ್ಟರು.

ಕ್ಷಣಾರ್ಧದಲ್ಲಿ ಜನರ ಬಳಿ ಬಂದ ವಿದ್ಯಾರ್ಥಿಗಳು ಪ್ರವಾಹ ಸಂತ್ರಸ್ತರ ನೆರವಿನ ಕುರಿತ ಪೋಸ್ಟರ್ ಗಳನ್ನು ಹಿಡಿದು ಸಹಾಯ ಕೋರಿದರು. ಸೇರಿದ್ದ ಜನರು ಕೈಗೆ ಬಂದಷ್ಟು ಹಣವನ್ನು ವಿದ್ಯಾರ್ಥಿಗಳ ನೆರೆ ನಿಧಿ ಸಂಗ್ರಹಕ್ಕೆ ನೀಡಿದ್ದಾರೆ. ಒಂದು ವಾರ ಹೀಗೆ ಮಾಬ್ ಡಾನ್ಸ್ ಮೂಲಕ ನಿಧಿ ಸಂಗ್ರಹಿಸುವ ಗುರಿ ಹೊಂದಿರುವ ವಿದ್ಯಾರ್ಥಿಗಳು ಅದರಿಂದ ಬಂದ ಹಣವನ್ನು ಕೊಡಗು-ಕೇರಳ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೀಡಲು ನಿರ್ಧರಿಸಿರುವುದು ಶ್ಲಾಘನೀಯ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...