alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗಳು ಪಾಲಿಸ್ತಿಲ್ಲ ಸರ್ಕಾರದ ಮಾರ್ಗಸೂಚಿ..!

school-children1

ಬೆಂಗಳೂರಲ್ಲಿ ಶಾಲಾ ಮಕ್ಕಳ ಸುರಕ್ಷತೆಗಾಗಿ ಹತ್ತಾರು ನಿಯಮಗಳನ್ನು ಜಾರಿ ಮಾಡಲಾಗಿದೆ. ಲೈಂಗಿಕ ಕಿರುಕುಳ, ಅಪಹರಣದಂತ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ಸರ್ಕಾರ ಜಾರಿ ಮಾಡಿದೆ. ಆದ್ರೆ ಬಹಳಷ್ಟು ಶಾಲೆಗಳು ಮಾತ್ರ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ.

ಸರ್ಕಾರದ ನಿಯಮದ ಪ್ರಕಾರ ಅಪರಿಚಿತರು ಶಾಲಾ ಆವರಣ ಪ್ರವೇಶಿಸುವಂತಿಲ್ಲ. ಆದ್ರೂ ಯಾರದ್ದೋ ಮಕ್ಕಳನ್ನು ಇನ್ಯಾರೋ ಬಂದು ಕರೆದುಕೊಂಡು ಹೋಗುವುದು ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಕ್ಕಳ ಸುರಕ್ಷತೆ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ಪಡೆಯುತ್ತಿರುವ ಶಾಲೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋದು ಪೋಷಕರ ಅಳಲು.

ಕೆಲವು ಶಾಲೆಗಳಲ್ಲಿ ಮಾತ್ರ ಐಡಿ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಉಳಿದ ಶಾಲೆಗಳಲ್ಲಿ ಅಪರಿಚಿತರು ಬಂದು ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಇಂತಹ ಘಟನೆಗಳು ನಡೆದಾಗ ಪೊಲೀಸ್ ಕಂಪ್ಲೇಂಟ್ ಕೂಡ ದಾಖಲಾಗದೇ ಇರುವುದರಿಂದ ಅವು ಜನರ ಗಮನಕ್ಕೂ ಬರುವುದಿಲ್ಲ ಎನ್ನುತ್ತಾರೆ ಪೋಷಕರು.

ಕಳೆದ ವರ್ಷ ಶಾಲಾ ಮಕ್ಕಳ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದ್ವು. ಅದಾದ್ಮೇಲೆ ಸರ್ಕಾರ ಕೆಲವು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದ್ರೆ ಅದ್ಯಾವುದನ್ನೂ ಶಾಲೆಗಳು ಪಾಲಿಸುತ್ತಿಲ್ಲ. ಶಾಲಾ ಆಡಳಿತ ಮಂಡಳಿಗಳು ಪೋಷಕರ ಕಡೆಗೆ ಬೊಟ್ಟು ಮಾಡಿವೆ. ಐಡಿ ಕಾರ್ಡ್ ಕಡ್ಡಾಯ ಮಾಡಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಕರೆತರಲು ಆಯಾಗಳನ್ನು, ಕೆಲಸದವರನ್ನು ಕಳುಹಿಸುತ್ತಾರೆ ಅಂತಾ ದೂರಿವೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...