alex Certify
ಕನ್ನಡ ದುನಿಯಾ       Mobile App
       

Kannada Duniya

ದಾರುಣ ಘಟನೆ! ಬಲೂನ್ ನುಂಗಿ ಮಗು ಸಾವು

ಬೆಂಗಳೂರು: ಆಟಿಕೆ ಮತ್ತು ತಿನಿಸುಗಳು ಮಕ್ಕಳ ಜೀವಕ್ಕೆ ಎರವಾದ ಅನೇಕ ಘಟನೆಗಳು ನಡೆದಿವೆ. ಅಂತಹುದೇ ದಾರುಣ ಘಟನೆಯೊಂದರ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಹುಳಿಮಾವು ಕಮ್ಮನಹಳ್ಳಿಯಲ್ಲಿ ಬಲೂನ್ ನುಂಗಿ 2 ವರ್ಷದ ಮಗು ಮೃತಪಟ್ಟಿದೆ. ನವಾಜ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಆಟವಾಡುವ ಸಂದರ್ಭದಲ್ಲಿ ನವಾಜ್ ಆಕಸ್ಮಿಕವಾಗಿ ಬಲೂನ್ ನುಂಗಿದ್ದು, ಉಸಿರಾಟ ತೊಂದರೆ ಕಾಣಿಸಿಕೊಂಡು ಅಸ್ವಸ್ಥನಾಗಿದ್ದಾನೆ.

ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಈ ವೇಳೆಗಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹುಳಿಮಾವು ಠಾಣೆ ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...