alex Certify
ಕನ್ನಡ ದುನಿಯಾ       Mobile App
       

Kannada Duniya

ನಾಟಿ ಕೋಳಿ ಕಳವು ಪ್ರಕರಣಕ್ಕೆ ತಿರುವು

ಬೆಂಗಳೂರು: ತಾವು ಸಾಕಿದ್ದ 35 ನಾಟಿ ಕೋಳಿ ಕಳುವಾಗಿದ್ದು, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಮಹಿಳೆಯೊಬ್ಬರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಜಮ್ಮ ಅವರು ಆಯುಕ್ತರ ಕಚೇರಿಗೆ ಆಗಮಿಸಿ ಹೆಚ್ಚುವರಿ ಆಯುಕ್ತರಿಗೆ ತಮ್ಮ ಕೋಳಿ ಕಳುವಾಗಿವೆ ಎಂದು ತಿಳಿಸಿದ್ದು, ಬೈಯಪ್ಪನಹಳ್ಳಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು.

ಅಸಲಿಗೆ ಗಿರಿಜಮ್ಮ ಅವರು ತಮ್ಮ ಮಗನನ್ನು ಜೈಲಿಗೆ ಕಳಿಸಿದ್ದ ಪಕ್ಕದ ಮನೆಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಟಿ ಕೋಳಿ ಕಳವಿನ ಕತೆ ಸೃಷ್ಠಿಸಿದ್ದಾರೆ ಎನ್ನಲಾಗಿದೆ.

ಗಿರಿಜಮ್ಮನವರ ಮಗ ಪಕ್ಕದ ಮನೆಯವರ ಸರ ಕಳವು ಪ್ರಕರಣದಲ್ಲಿ 2011 ರಲ್ಲಿ ಜೈಲಿಗೆ ಹೋಗಿ ಬಂದಿದ್ದು, ಪಕ್ಕದ ಮನೆಯವರ ವಿರುದ್ಧ ಕೋಳಿ ಕಳುವಾದ ಬಗ್ಗೆ ಗಿರಿಜಮ್ಮ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ, ಪೊಲೀಸರು ಪರಿಶೀಲನೆ ನಡೆಸಿದಾಗ, ನಿಜ ಸಂಗತಿ ಗೊತ್ತಾಗಿ ಇಬ್ಬರನ್ನೂ ರಾಜಿ ಮಾಡಿಸಿ ಕಳಿಸಿದ್ದಾರೆ. ನಂತರದಲ್ಲಿ ಮತ್ತೆ ಗಿರಿಜಮ್ಮ ಪಕ್ಕದ ಮನೆಯವರ ವಿರುದ್ಧ ದೂರು ನೀಡಲು ಮುಂದಾಗಿದ್ದರು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...