alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆಬೆತ್ತಲಾಗಿ ಕಾರಿನ ಮೇಲೆ ಸವಾರಿ

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು, ಅರೆನಗ್ನರಾಗಿ ಕಾರಿನ ಮೇಲೆ ಸವಾರಿ ಮಾಡಿದ ಘಟನೆ ನಡೆದಿದೆ.

ಯಶವತಂಪುರ ಬಳಿ ಮದ್ಯಸೇವನೆ ಮಾಡಿ ಇಂಡಿಕಾ ಕಾರಿನಲ್ಲಿ ಆಗಮಿಸಿದ್ದ ಮೂವರು ಯುವಕರು ಪುಂಡಾಟಿಕೆ ಮೆರೆದಿದ್ದಾರೆ. ಅರೆನಗ್ನನಾಗಿ ಕಾರಿನ ಮೇಲೆ ಯುವಕನೊಬ್ಬ ಕುಳಿತಿದ್ದು, ಜೋರಾಗಿ ಕಿರುಚಾಡುತ್ತಾ, ಬೇರೆ ವಾಹನಗಳ ಸವಾರರಿಗೆ ತೊಂದರೆಕೊಟ್ಟಿದ್ದಾನೆ.

ಆತನ ಜೊತೆಗಿದ್ದವರು ಅರೆಬೆತ್ತಲೆಯಾಗಿದ್ದ ಯುವಕನನ್ನು ಕೆಳಗಿಳಿಸುವ ಬದಲು ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ. ಈ ಪುಂಡರ ಅನುಚಿತ ವರ್ತನೆಯಿಂದಾಗಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಮುಜುಗರ ಅನುಭವಿಸುವಂತಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಪುಂಡರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...