alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಲ್ಲಿ ಚಾಲಕ; ಗ್ರಾಹಕನಿಂದಲೇ ಕ್ಯಾಬ್ ಚಾಲನೆ

ಬೆಂಗಳೂರು: ಉಬರ್ ಕ್ಯಾಬ್ ಬುಕ್ ಮಾಡಿದ್ದಾಗ ಆ್ಯಪ್ ನಲ್ಲಿ ತೋರಿಸಿದ ಕಾರಿನ ಚಾಲಕನ‌ ಬದಲಿಗೆ ಮತ್ತೊಬ್ಬ ಚಾಲಕ ಆಗಮಿಸಿದ್ದಾನೆ ಎನ್ನುವ ಆರೋಪವನ್ನು ಬೆಂಗಳೂರಿನ ಉಬರ್ ಗ್ರಾಹಕರೊಬ್ಬರು ಆರೋಪಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಉಬರ್ ಕ್ಯಾಬ್ ಬುಕ್ ಮಾಡಿದ ಗ್ರಾಹಕ ಸೂರ್ಯ ಓರುಗಂಟಿ ಎನ್ನುವವರಿಗೆ ತಾನು ಬುಕ್ ಮಾಡಿದ್ದಾಗ ಆ್ಯಪ್ ನಲ್ಲಿ ತೋರಿಸಿದ ಚಾಲಕನಿಗೂ ಸ್ಥಳಕ್ಕೆ ಬಂದ ಚಾಲಕನಿಗೂ ಹೋಲಿಕೆ ಇಲ್ಲದಿರುವುದು ಗೊತ್ತಾಗಿದೆ. ಇದರೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಚಾಲಕ, ಮದ್ಯಪಾನ ಮಾಡಿದ್ದ. ಜೊತೆಗೆ ಗ್ರಾಹಕರನ್ನು ಪಿಕ್ ಮಾಡಿದ ಬಳಿಕ, ಕಾರ್ ಓಡಿಸಲು ಹೇಳಿ ತಾನು ನಿದ್ರೆಗೆ ಜಾರಿದ್ದಾನೆ.

ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿರುವ ಸೂರ್ಯ, ನಾನು ಬುಕ್ ಮಾಡಿದ್ದ ಚಾಲಕನಿಗೂ, ಪಿಕ್ ಅಪ್ ಮಾಡಿದ ಚಾಲಕನಿಗೂ ಹೋಲಿಕೆಯಿರಲಿಲ್ಲ.‌ ಇದರೊಂದಿಗೆ ಪಾನಮತ್ತನಾಗಿದ್ದ ಚಾಲಕ, ಕಾರಿನಲ್ಲಿಯೇ ನಿದ್ರೆಗೆ ಜಾರಿರುವ ಫೋಟೋಗಳೊಂದಿಗೆ ಟ್ವೀಟರ್ ನಲ್ಲಿ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಉಬರ್ ಸಂಸ್ಥೆ ಪ್ರತಿಕ್ರಿಯಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...