alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಪೋದಲ್ಲೇ ವಿಷ ಸೇವಿಸಿದ BMTC ಚಾಲಕ

ಬೆಂಗಳೂರು: ಡಿಪೋ ಮ್ಯಾನೇಜರ್ ಕಿರುಕುಳದಿಂದ ನೊಂದ ಬಿ.ಎಂ.ಟಿ.ಸಿ. ಬಸ್ ಚಾಲಕರೊಬ್ಬರು ವಿಷ ಸೇವಿಸಿದ್ದಾರೆ.

ಶಾಂತಿನಗರ ಡಿಪೋ -2 ಚಾಲಕ ಮಧು ವಿಷ ಸೇವಿಸಿದವರು. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ, ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಾಹಿತಿ ತಿಳಿದ ಶಾಂತಿನಗರ ಡಿಪೋ ಚಾಲಕರು, ನಿರ್ವಾಹಕರು ಪ್ರತಿಭಟನೆ ನಡೆಸಿದ್ದಾರೆ.

ಕಿರುಕುಳ ನೀಡಿ ಮಧು ಆತ್ಮಹತ್ಯೆಗೆ ಯತ್ನಿಸಲು ಕಾರಣರಾದ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಬಿ.ಎಂ.ಟಿ.ಸಿ. ಅಧಿಕಾರಿಗಳೊಂದಿಗೆ ಪ್ರತಿಭಟನಾನಿರತ ಚಾಲಕರು, ನಿರ್ವಾಹಕರು ಮಾತಿನ ಚಕಮಕಿ ನಡೆಸಿದ್ದಾರೆ. ಬಸ್ ಗಳನ್ನು ಡಿಪೋದಿಂದ ಹೊರ ತೆಗೆಯದೇ ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಸ್ಥಿತಿ ಉಂಟಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...