alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲೇ ಜಿಪ್ ತೆಗೆದ ಕಾಮುಕನಿಂದ ಅನುಚಿತ ವರ್ತನೆ

ಬೆಂಗಳೂರು: ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಕಾಮುಕರು ಅನುಚಿತವಾಗಿ ವರ್ತಿಸಿದ ಅನೇಕ ಘಟನೆ ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ. ಬಸ್ ನಲ್ಲಿ ಯುವತಿಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ, ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ಮಾರ್ಚ್ 13 ರಂದು ರಾತ್ರಿ 8 ಗಂಟೆಗೆ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಯುವತಿ ಪಕ್ಕದಲ್ಲಿ ಸುಮಾರು 65 ವರ್ಷದ ಹಿರಿಯ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕುಳಿತುಕೊಳ್ಳಲು ಯುವತಿ ಸೂಚಿಸಿದರೂ, ನಿರಾಕರಿಸಿದ ವ್ಯಕ್ತಿ, ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ಯುವತಿ ಜೋರು ಮಾಡಿದಾಗ, ಆಕೆಯ ಮೇಲೆಯೇ ರೇಗಾಡಿದ್ದಾನೆ. ಬೇಸತ್ತ ಯುವತಿ ಕೋರಮಂಗಲ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...