alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ‘ವಿಶ್ವದ ಅತ್ಯಂತ ಕ್ರಿಯಾತ್ಮಕ ನಗರ’

blore1_1484728353

ಮಹಿಳೆಯರ ಮೇಲಿನ ದೌರ್ಜನ್ಯ, ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಚಟುವಟಿಕೆ ಮತ್ತು ಟ್ರಾಫಿಕ್ ಸಮಸ್ಯೆಯಿಂದ ನಲುಗಿದ್ದ ಬೆಂಗಳೂರಿಗೆ ಕೊನೆಗೂ ಕೊಂಚ ಸಮಾಧಾನಕರ ಸುದ್ದಿ ಸಿಕ್ಕಿದೆ. ಭಾರತದ ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಉದ್ಯಾನ ನಗರಿ ಇದೀಗ ಲಂಡನ್, ಸಿಲಿಕಾನ್ ವ್ಯಾಲಿ ಮತ್ತು ಶಾಂಘೈನಂತಹ ದೊಡ್ಡ ದೊಡ್ಡ ಸಿಟಿಗಳನ್ನೇ ಹಿಂದಿಕ್ಕಿದೆ.

‘ವಿಶ್ವದ ಅತ್ಯಂತ ಡೈನಾಮಿಕ್ ನಗರ’ ಎನಿಸಿಕೊಂಡಿದೆ. ಆರ್ಥಿಕ ಪ್ರಗತಿ ಹಾಗೂ ಬದಲಾವಣೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯದಲ್ಲಿ ಬೆಂಗಳೂರು ಜಗತ್ತಿನಲ್ಲಿ ಎಲ್ಲಾ ನಗರಗಳಿಗಿಂತ್ಲೂ ಮುಂದಿದೆ. JLLನ ‘ವಾರ್ಷಿಕ ನಗರ ಆವೇಗ ಸೂಚ್ಯಂಕ’ (CMI) ಬೆಂಗಳೂರಿಗೆ ಅಗ್ರಸ್ಥಾನ ನೀಡಿದೆ.

ವಿಶ್ವದ ಟಾಪ್ 10 ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹೈದ್ರಾಬಾದ್ 5ನೇ ಸ್ಥಾನ ಪಡೆದಿರುವುದು ವಿಶೇಷ. ಚೆನ್ನೈ ಹಾಗೂ ಪುಣೆ ಟಾಪ್ 20ರ ಪಟ್ಟಿಯಲ್ಲಿ ಹಾಗೂ ದೆಹಲಿ, ಮುಂಬೈ ಟಾಪ್ 30ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. 42 ಪ್ರಮುಖ ವಿಷಯಗಳನ್ನು ಪರಿಗಣಿಸಿ ಜಗತ್ತಿನ ಅತ್ಯಂತ ಕ್ರಿಯಾತ್ಮಕ ನಗರ ಯಾವುದು ಅನ್ನೋದನ್ನು ಆಯ್ಕೆ ಮಾಡಲಾಗುತ್ತದೆ.

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಂಡಿರುವ ಬೆಂಗಳೂರಿನಲ್ಲಿ ಉತ್ತಮ ಸಂಶೋಧನಾ ಸಂಸ್ಥೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಭಾರತದ ಶೇ.40 ರಷ್ಟು ಐಟಿ ಕೈಗಾರಿಕೆಗಳು ಬೆಂಗಳೂರಿನಲ್ಲೇ ಇವೆ. ಹಾಗಾಗಿ ಉದ್ಯಮಿಗಳ ಪಾಲಿನ ಸ್ವರ್ಗವಾಗಿರುವ ಬೆಂಗಳೂರು ‘ವಿಶ್ವದ ಅತ್ಯಂತ ಡೈನಾಮಿಕ್ ನಗರ’ ಎಂಬ ಖ್ಯಾತಿ ಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...