alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಜನಿಸಿದಾಗ ಬಂತು ಅಪ್ಪನ ಸಾವಿನ ಸುದ್ದಿ

bagal-kote

ಬೆಂಗಳೂರು: ಮಗಳು ಜನಿಸಿದ ಖುಷಿಯಲ್ಲಿ ತಂದೆಗೆ ಹೃದಯಾಘಾತವಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ರಾಘವೇಂದ್ರ(35) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಎಲ್.ಐ.ಸಿ. ಏಜೆಂಟ್ ಆಗಿದ್ದ ರಾಘವೇಂದ್ರ ಕಳೆದ 5 ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದರು.

ಪತ್ನಿ ಹೆರಿಗೆಗೆಂದು ತವರಿಗೆ ಹೋಗಿದ್ದು, ಬೆಳಿಗ್ಗೆ ಹೆಣ್ಣು ಮಗು ಜನಿಸಿದೆ.

ಇದೇ ಕಾರಣಕ್ಕೆ ಅವರ ಪತ್ನಿಯ ಮನೆಯವರು ಫೋನ್ ಮಾಡಿದ್ದು, ಖುಷಿಯಲ್ಲಿ ರಾಘವೇಂದ್ರ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.

ನಂತರದಲ್ಲಿ ರಾಘವೇಂದ್ರ ಫೋನ್ ರಿಸೀವ್ ಮಾಡದ ಕಾರಣ, ಪತ್ನಿಯ ಮನೆಯವರು ಪಕ್ಕದ ಮನೆಯವರಿಗೆ ಫೋನ್ ಮಾಡಿದ್ದಾರೆ.

ಅವರು ಬಂದು ನೋಡಿದಾಗ ರಾಘವೇಂದ್ರ ಮೃತಪಟ್ಟಿರುವುದು ಗೊತ್ತಾಗಿದೆ. ಈ ಸಂಬಂಧ ವಿಜಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...