alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿಯನನ್ನು ಪ್ರೇಮಿಸಿದ ಉದ್ಯಮಿ ಪತ್ನಿಯಿಂದ ಖತರ್ನಾಕ್ ಪ್ಲಾನ್

ಬೆಂಗಳೂರು: ಪ್ರಿಯಕರನ ಜೊತೆಯಾಗಿ ಬಾಳಲು ಮುಂದಾಗಿದ್ದ ಮಹಿಳೆ, ಪತಿಯನ್ನು ಜೈಲಿಗೆ ಕಳಿಸಲು ಖತರ್ನಾಕ್ ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾಳೆ.

ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ 2 ನೇ ಪತ್ನಿಯಾಗಿರುವ ವೀಣಾ(32) ಹಾಗೂ ಆಕೆಯ ಪ್ರಿಯಕರ ಶ್ರೀಧರ್(23) ಬಂಧಿತ ಆರೋಪಿಗಳು. ಉದ್ಯಮಿಗೆ ಹಿಂದೆಯೇ ಮದುವೆಯಾಗಿದ್ದು, ವೀಣಾರನ್ನು 2 ನೇ ಮದುವೆಯಾಗಿದ್ದಾರೆ. ಪ್ರತ್ಯೇಕವಾಗಿ ಪತ್ನಿಯರಿಗೆ ಮನೆ ಮಾಡಿಕೊಟ್ಟಿದ್ದಾರೆ.

ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದ ವೀಣಾ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಶ್ರೀಧರ್ ನೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದು, ಇಬ್ಬರು ಸೇರಿ ಉದ್ಯಮಿಯನ್ನು ಜೈಲಿಗೆ ಕಳಿಸಲು ಮುಂದಾಗಿದ್ದರು.

ಅದರಂತೆ ಉದ್ಯಮಿಯ ಹೆಸರಲ್ಲಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ. ತನಿಖೆ ನಡೆಸಿದ ಪೊಲೀಸರು, ವೀಣಾ ಹಾಗೂ ಶ್ರೀಧರನ ಸಂಚು ಬಯಲಿಗೆಳೆದು ಇಬ್ಬರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...