alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರೆದುರಲ್ಲೇ ಮೂತ್ರ ವಿಸರ್ಜನೆ

ಬೆಂಗಳೂರು: ರಾಜಧಾನಿಯಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟಿಕೆ ಮುಂದುವರೆದಿದೆ. ಯುವಕನೊಬ್ಬ ಕುಡಿದ ಮತ್ತಿನಲ್ಲಿ ಜನನಿಬಿಡ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಪ್ರಶ್ನಿಸಿದವರ ಮೇಲೆಯೇ ಹರಿಹಾಯ್ದಿದ್ದಾನೆ.

ಯಲಹಂಕ ಕೋಗಿಲು ಕ್ರಾಸ್ ಬಳಿ 30 ವರ್ಷದ ವಾಜ್ ಎಂಬಾತ ಹೋಟೆಲ್ ಒಂದರಲ್ಲಿ ಊಟ ಪಾರ್ಸೆಲ್ ಮಾಡಿಸಿಕೊಂಡು ಹೊರ ಬಂದಿದ್ದಾನೆ.

ಅಮಲಿನಲ್ಲಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದು, ಇದಕ್ಕೆ ಅಲ್ಲಿದ್ದವರು ಆಕ್ಷೇಪಿಸಿದ್ದಾರೆ. ಆಗ ಜನರನ್ನು ನಿಂದಿಸಿದ ವಾಜ್, ಜೋರು ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಕುಡಿದ ಅಮಲಿನಲ್ಲಿ ಆಫ್ರಿಕನ್ ಪ್ರಜೆಗಳು ಪುಂಡಾಟಿಕೆ ನಡೆಸುವುದು ಇದೇ ಮೊದಲೇನಲ್ಲ. ಮದ್ಯದ ಅಮಲಿನಲ್ಲಿ ಅವಾಂತರ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಈಗ ಆಫ್ರಿಕನ್ ಯುವಕ ಬಹಿರಂಗ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...