alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯೊಂದಿಗೆ ಎ.ಸಿ.ಪಿ. ಅನುಚಿತ ವರ್ತನೆ

ಬೆಂಗಳೂರು: ಲೈಂಗಿಕ ದೌರ್ಜನ್ಯದ ದೂರು ದಾಖಲಿಸಲು ಬಂದಿದ್ದ ಯುವತಿಯೊಂದಿಗೆ, ಎ.ಸಿ.ಪಿ. ಅನುಚಿತವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ.

ರವಿ ಮತ್ತು ಹನುಮಂತರಾಯ ಎಂಬುವವರು ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ್ದಾಗಿ ಯುವತಿ ದೂರು ನೀಡಲು ಠಾಣೆಗೆ ಆಗಮಿಸಿದ್ದ ಸಂದರ್ಭದಲ್ಲಿ, ಪೊಲೀಸ್ ಅಧಿಕಾರಿಗಳು ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ.

ಲೈಂಗಿಕ ಕಿರುಕುಳ ನೀಡಿದವ ಎಲ್ಲಿ ಮುಟ್ಟಿದ, ಹೇಗೆ ಮುಟ್ಟಿದ ಎಂದೆಲ್ಲಾ ಯಶವಂತಪುರ ಸಬ್ ಡಿವಿಜನ್ ಎ.ಸಿ.ಪಿ. ಕೇಳುತ್ತಾ ಅನುಚಿತವಾಗಿ ವರ್ತಿಸಿದ್ದು, ಅವರಿಗೆ ಸೋಲದೇವನಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಸಾಥ್ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದು, ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮೊದಲಿಗೆ ಠಾಣೆಗೆ ಯುವತಿ ದೂರು ನೀಡಿದ್ದ ಸಂದರ್ಭದಲ್ಲಿ ಪೊಲೀಸರು ಸ್ವೀಕರಿಸಿರಲಿಲ್ಲ. ಬಳಿಕ ತಡವಾಗಿ ದೂರು ದಾಖಲಿಸಿಕೊಂಡಿದ್ದು, ಎ.ಸಿ.ಪಿ. ವಿಚಾರಣೆಯ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...