alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ವಯಸ್ಸಿನವನೊಂದಿಗೆ ಪ್ರಿನ್ಸಿಪಾಲ್ ಲವ್ವಿಡವ್ವಿ

ಬೆಂಗಳೂರು: ಖಾಸಗಿ ಶಾಲೆಯೊಂದರ ಪ್ರಿನ್ಸಿಪಾಲ್ ಹಾಗೂ ಅದೇ ಶಾಲೆಯಲ್ಲಿ ರಿಸೆಪ್ಷನಿಸ್ಟ್ ಆಗಿದ್ದ ಯುವಕನ ನಡುವೆ ಲವ್ ಆಗಿ ಬ್ರೇಕ್ ಅಪ್ ಆಗಿದ್ದು, ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

21 ವರ್ಷದ ತರುಣ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಎಸ್.ಎಸ್.ಎಲ್.ಸಿ. ಫೇಲ್ ಆಗಿದ್ದ ಆತ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದಾನೆ. ಅದೇ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿದ್ದ 40 ವರ್ಷದ ಮಹಿಳೆ ಈತನೊಂದಿಗೆ ಸಂಬಂಧ ಬೆಳೆಸಿದ್ದಾಳೆ.

ಕಳೆದ 1 ವರ್ಷದಿಂದ ಇವರಿಬ್ಬರ ನಡುವೆ ಸಂಬಂಧ ಬೆಳೆದಿದ್ದು, 4 ತಿಂಗಳಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಕೇರಳದ ಮೂಲದ ಪ್ರಿನ್ಸಿಪಾಲ್ ಗೆ ಮದುವೆಯಾಗಿ ತರುಣ್ ವಯಸ್ಸಿನ ಪುತ್ರಿಯಿದ್ದಾಳೆ.

ಇತ್ತೀಚೆಗೆ ತರುಣ್ ನನ್ನು ದೂರ ಮಾಡಿದ ಮಹಿಳೆ, ಆತ ಕೆಲಸ ಬಿಡಲು ಕಾರಣವಾಗಿದ್ದಾಳೆ. ಇದರಿಂದ ನೊಂದ ತರುಣ್ ತನಗೆ ಪ್ರಿನ್ಸಿಪಾಲ್ ಬೇಕೆಂದು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಚಾರ ತಿಳಿದ ಶಾಲೆಯ ಮುಖ್ಯಸ್ಥರು ತರುಣ್ ನನ್ನು ಕರೆಸಿ ಬುದ್ದಿವಾದ ಹೇಳಿ ಕಳಿಸಿದ್ದಾರೆ. ಆದರೆ, ತರುಣ್ ಮಾತ್ರ ತನ್ನ ಹಠವನ್ನು ಬಿಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...