alex Certify
ಕನ್ನಡ ದುನಿಯಾ       Mobile App
       

Kannada Duniya

ಹೂತಿದ್ದ ಶವ ಹೊರ ತೆಗೆದರು, ಕಾರಣ ಗೊತ್ತಾ..?

dead-b

ಬಳ್ಳಾರಿ: ಮಳೆ ಮಾಯವಾಗಿರುವುದರಿಂದ ಜನರಿಗೆ ಏನು ಮಾಡಬೇಕೆಂಬುದೆ ತಿಳಿಯದಾಗಿದೆ. ಯಾರು ಏನು ಹೇಳಿದರೂ ಅದನ್ನು ಅನುಸರಿಸುವಂತಾಗಿದೆ.

ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗದಲ್ಲಿ ಕೆಲವು ತಿಂಗಳ ಹಿಂದೆ ತುಂಬಿದ್ದ ಕೆರೆಯ ನೀರನ್ನು ಖಾಲಿ ಮಾಡಲಾಗಿತ್ತು.

ಕೆರೆ ಖಾಲಿ ಮಾಡಿದರೆ ಮಳೆಯಾಗುತ್ತದೆ ಎಂದು ಕೆಲವರು ಹೇಳಿದ್ದರಿಂದ ಬರಗಾಲದಲ್ಲಿಯೂ ತುಂಬಿದ್ದ ಕೆರೆಯ ನೀರನ್ನು ಖಾಲಿ ಮಾಡಿದ್ದರು.

ಈಗ ಕೊಟ್ಟೂರು ಸಮೀಪದ ಉಜ್ಜನಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಶವವನ್ನು ಹೊರ ತೆಗೆದು ಸುಡಲಾಗಿದೆ.

ಚರ್ಮಕ್ಕೆ ತೊನ್ನು ತಗುಲಿದ್ದ ವ್ಯಕ್ತಿ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅವರ ಶವವನ್ನು ಹೊರ ತೆಗೆದು ಸುಟ್ಟರೆ ಮಳೆಯಾಗುತ್ತದೆ ಎಂದು ಕೆಲವರು ಹೇಳಿದ್ದರಿಂದ ಗ್ರಾಮಸ್ಥರು ಸ್ಮಶಾನಕ್ಕೆ ತೆರಳಿ ಶವ ಹೊರ ತೆಗೆದು ಸುಟ್ಟಿದ್ದಾರೆ ಎನ್ನಲಾಗಿದೆ. ತೊನ್ನು ತಗುಲಿದ ವ್ಯಕ್ತಿಯ ಶವ ಸುಟ್ಟಿರುವುದರಿಂದ ಮಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...