alex Certify
ಕನ್ನಡ ದುನಿಯಾ       Mobile App
       

Kannada Duniya

ಬಳ್ಳಾರಿಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಬಳ್ಳಾರಿ: ಬಳ್ಳಾರಿಯ ಹಂದ್ರಾಳದಲ್ಲಿ ಗುರುವಾರ ರಾತ್ರಿ ಬೆಚ್ಚಿ ಬೀಳುವ ಘಟನೆ ನಡೆದಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಪಾಲಿಕೆ ಸದಸ್ಯ ಹಂದ್ರಾಳ ಸೀತಾರಾಮ ಅವರ ಹತ್ಯೆಗೆ ಯತ್ನಿಸಲಾಗಿದೆ.

ಆಂಧ್ರಪ್ರದೇಶದಿಂದ ಬಂದಿದ್ದ 11 ಮಂದಿ ದುಷ್ಕರ್ಮಿಗಳ ತಂಡ ಸೀತಾರಾಮ ಅವರ ಮೇಲೆ ದಾಳಿ ಮಾಡಿ ಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ದಾಳಿಕೋರರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಕೋರರ ತಂಡದಲ್ಲಿದ್ದ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಆಂಧ್ರಪ್ರದೇಶದ ಅನಂತಪುರ, ತಾಡಪತ್ರಿಯಿಂದ ಬಂದಿದ್ದ 11 ಮಂದಿ ಸುಪಾರಿ ಹಂತಕರು, ಮನೆಯ ಸಮೀಪದಲ್ಲೇ ಇದ್ದ ಹಂದ್ರಾಳ ಸೀತಾರಾಮ ಅವರ ಹತ್ಯೆ ಯತ್ನಿಸಿದಾಗ ಸ್ಥಳೀಯರು ರಕ್ಷಿಸಿದ್ದಾರೆ. ಎ.ಪಿ.ಎಂ.ಸಿ. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಸೀತಾರಾಮ ಮುಂದಿನ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ರಾಜಕೀಯ ಕಾರಣದಿಂದ ಈ ದಾಳಿ ನಡೆದಿದೆಯೇ ಅಥವಾ ವೈಯಕ್ತಿಕ ಕಾರಣದಿಂದ ನಡೆದಿದೆಯೇ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...