alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯಿಂದಲೇ ನಡೀತು ಮಾನಗೇಡಿ ಕೃತ್ಯ

hospet

ಬಳ್ಳಾರಿ: ಮದುವೆಯಾಗಿ ಇಬ್ಬರು ಮಕ್ಕಳಿದ್ದ ಮಹಿಳೆಯೊಬ್ಬಳು ಗಂಡನನ್ನು ಬಿಟ್ಟು ಬೇರೊಬ್ಬನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ.

ಪ್ರಿಯಕರನೊಂದಿಗೆ ಹೋಗುವಾಗ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಮಹಿಳೆ, ಮಗನನ್ನು ಹಾಸ್ಟೆಲ್ ಗೆ ಸೇರಿಸಿ, ಮಗಳನ್ನು ಮನೆಯ ಕೆಲಸಕ್ಕೆ ಇಟ್ಟುಕೊಂಡಿದ್ದಾಳೆ.

ಮಗಳನ್ನು ಶಾಲೆಗೆ ಸೇರಿಸಿದ್ದರೂ, ಶಾಲೆಗೆ ಕಳುಹಿಸದೇ ಮನೆ ಕೆಲಸ ಮಾಡಿಸುತ್ತಿದ್ದ ಮಹಿಳೆ, ನಿಮ್ಮ ತಂದೆ, ತಾಯಿ ಸಾವನ್ನಪ್ಪಿದ್ದಾರೆ. ನಾವೇ ನಿಮ್ಮನ್ನು ಸಾಕುತ್ತಿರುವುದಾಗಿ ಹೇಳಿದ್ದಾಳೆ.

ತಾಯಿಯೇ ಹೀಗೆ ಹೇಳಿದ್ದರಿಂದ ಬಾಲಕಿ ನೊಂದಿದ್ದಾಳೆ. ಮಗಳಿಗೇ ದೈಹಿಕ ಹಿಂಸೆ ನೀಡುತ್ತಿದ್ದ ಮಹಿಳೆ ಒಮ್ಮೆ ಕೊಲೆಗೂ ಯತ್ನಿಸಿದ್ದಾಳೆ.

ತಾಯಿಯ ಕಿರುಕುಳದಿಂದ ಬೇಸತ್ತ ಬಾಲಕಿ ಮನೆ ಬಿಟ್ಟು ಬಂದಿದ್ದಾಳೆ. 4 ನೇ ತರಗತಿಯವರೆಗೂ ಹೊಸಪೇಟೆಯಲ್ಲಿ ಓದಿದ್ದ ಬಾಲಕಿ ಇಲ್ಲಿಗೆ ಬಂದಿದ್ದು, ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ನೆರವಿನಿಂದ ಬಳ್ಳಾರಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ.

ಹೊಸಪೇಟೆಯ ರಾಣಿಪೇಟೆಯ ನಿವಾಸಿಯಾಗಿದ್ದ ಮಹಿಳೆ ಅಂತರ್ಜಾತಿ ವಿವಾಹವಾಗಿದ್ದು, ಪತಿ ವಿಪರೀತ ಮದ್ಯ ವ್ಯಸನಿಯಾಗಿದ್ದರಿಂದ ಬೇರೆ ವ್ಯಕ್ತಿಯೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಬೆಂಗಳೂರಲ್ಲಿ ನೆಲೆಸಿದ್ದಾಳೆ. ಯಾವುದೇ ಕಾರಣಕ್ಕೂ ತನ್ನನ್ನು ತಾಯಿಯೊಂದಿಗೆ ಕಳಿಸಬೇಡಿ ಇಲ್ಲಿಯೇ ಇರುತ್ತೇನೆ ಎಂದು ಬಾಲಕಿ ಮನವಿ ಮಾಡಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...