alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಸಮೇತ ಬಾವಿಗೆ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೀರಾಪುರಹಟ್ಟಿಯಲ್ಲಿ ಪುರುಷ ಹಾಗೂ ಮಹಿಳೆ ಬೈಕ್ ಸಮೇತ 130 ಅಡಿ ಆಳದ ಬಾವಿಗೆ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಬೈಕ್ ನಲ್ಲಿ ಕರೆದೊಯ್ದಿದ್ದ ವ್ಯಕ್ತಿಯೇ ಆಕೆಯನ್ನು ಬಾವಿಗೆ ತಳ್ಳಿ ಹತ್ಯೆ ಮಾಡಲು ಯತ್ನಿಸಿದ ವೇಳೆ ಸಾವಿಗೀಡಾಗಿದ್ದಾನೆಂದು ಹೇಳಲಾಗಿದೆ.

ಗಾಯಗೊಂಡು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಕ್ಕವ್ವ ಖೋತ್, ಈ ಕುರಿತು ಮಾಹಿತಿ ನೀಡಿದ್ದು, ನವೆಂಬರ್ 7 ರಂದು ಸಂಜೆ7-30 ರ ಸುಮಾರಿಗೆ ಮೆಕ್ಕೆ ಜೋಳ ಕಟಾವು ಮಾಡುವ ಕೆಲಸವಿದೆಯೆಂದು ಲಕ್ಕಪ್ಪ ತನ್ನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದು, ಊರ ಹೊರ ವಲಯದಲ್ಲಿದ್ದ ಬಾವಿಗೆ ತಳ್ಳಿ ಹತ್ಯೆ ಮಾಡಲು ಯತ್ನಿಸಿದನೆಂದು ಆರೋಪಿಸಿದ್ದಾಳೆ.

ತನ್ನನ್ನು ಬಾವಿಗೆ ತಳ್ಳುವ ವೇಳೆ ಲಕ್ಕಪ್ಪನೂ ಬಾವಿಯೊಳಗೆ ಬಿದ್ದಿದ್ದು, ಬೈಕ್ ಆತನ ಮೇಲೆ ಬಿದ್ದಿತ್ತೆಂದು ಹೇಳಿದ್ದಾಳೆ. ತಾನು ರಕ್ಷಣೆಗಾಗಿ ಕೂಗಿಕೊಂಡಾಗ ಬಹು ಹೊತ್ತಿನ ಬಳಿಕ ಕೆಲವರು ಧಾವಿಸಿ ಬಂದು ರಕ್ಷಣೆ ಮಾಡಿದ್ದಾಗಿ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕೋಡಿ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...