alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ.ವಿ. ಚಾನಲ್ ಚೇಂಜ್ ಮಾಡುವ ವಿಚಾರಕ್ಕೆ ಕೊಲೆ

ಬೆಳಗಾವಿ: ಟಿ.ವಿ. ಚಾನಲ್ ಚೇಂಜ್ ಮಾಡುವ ವಿಚಾರಕ್ಕೆ ಜಗಳವಾಗಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆದಿದೆ.

31 ವರ್ಷದ ಲೋಕೇಶ್ ಕೊಲೆಯಾದವರು. ಅವರ ಸಹೋದರ ಸಂತೋಷ್ ಕೊಲೆ ಆರೋಪಿಯಾಗಿದ್ದು, ಆತನನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಯಲ್ಲಿ ಸಹೋದರರಿಬ್ಬರು ಊಟ ಮಾಡುವ ಸಂದರ್ಭದಲ್ಲಿ ಲೋಕೇಶ್ ಟಿ.ವಿ. ಚಾನಲ್ ಬದಲಿಸುವಂತೆ ಸಂತೋಷ್ ಗೆ ಹೇಳಿದ್ದಾರೆ. ಆದರೆ, ಆತ ಬದಲಿಸದ ಕಾರಣ, ಬೈದಾಡಿದ್ದಾರೆ.

ದುಡಿಯದೇ ಮನೆಯಲ್ಲಿ ಊಟ ಮಾಡ್ತಿಯಾ. ತಿರುಗಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದೀಯಾ ಎಂದು ತಮ್ಮನಿಗೆ ಬೈದಾಡಿದ್ದು, ಇದರಿಂದ ಆಕ್ರೋಶಗೊಂಡ ಸಂತೋಷ್, ಕಲ್ಲಿನಿಂದ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡು ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...