alex Certify
ಕನ್ನಡ ದುನಿಯಾ       Mobile App
       

Kannada Duniya

ಹಣದ ರಾಶಿ ಕಂಡು ದಂಗಾದ್ರು ದಾಳಿ ಮಾಡಿದ ಅಧಿಕಾರಿಗಳು…!

ಬೆಳಗಾವಿ: ಬೆಳಗಾವಿ ಎ.ಪಿ.ಎಂ.ಸಿ. ಠಾಣೆ ಪೊಲೀಸರು ಮತ್ತು ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಚುನಾವಣೆಯ ವೇಳೆ ಮತದಾರರಿಗೆ ಹಂಚಲು ತಯಾರಿಸುತ್ತಿದ್ದ ನಕಲಿ ನೋಟು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ವಿಶ್ವೇಶ್ವರಯ್ಯನಗರದ ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ನ ಪಾಳು ಬಿದ್ದ ಮನೆಯೊಂದರ ಮೇಲೆ ದಾಳಿ ಮಾಡಲಾಗಿದ್ದು, ಬರೋಬ್ಬರಿ 7 ಕೋಟಿ ರೂ. ಮೌಲ್ಯದ ನಕಲಿ ನೋಟು ವಶಕ್ಕೆ ಪಡೆಯಲಾಗಿದೆ.

2000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು, ವೈಟ್ ಪೇಪರ್ ಹಾಗೂ ಪ್ರಿಂಟಿಂಗ್ ಯಂತ್ರ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ಮೂಲದ ಅಜಿತ್ ಕುಮಾರ್ ನಿಡೋಣಿ ಎಂಬುವವನನ್ನು ಬಂಧಿಸಲಾಗಿದೆ.

ಚುನಾವಣೆಯಲ್ಲಿ ಮತದಾರರಿಗೆ ಹಂಚಲು ನೋಟು ಪ್ರಿಂಟ್ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...