alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೊಲೆಗೆ ಕೊಲೆಯ ಮೂಲಕವೇ ಉತ್ತರ ಕೊಡಲು ಸಿದ್ಧರಾಗಿ’

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ, ಬೆಳಗಾವಿಯಲ್ಲಿ ಇಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಆರ್.ಎಸ್.ಎಸ್. ಮುಖಂಡ ರಾಮಚಂದ್ರ ಎಡಕೆ, ಕೊಲೆಗೆ ಕೊಲೆಯ ಮೂಲಕವೇ ಉತ್ತರಿಸಲು ಸಿದ್ಧರಾಗಿ ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪರೇಶ್ ಮೇಸ್ತಾ ಸಾವಿಗೆ 1 ಲಕ್ಷ ರೂ. ಪರಿಹಾರ ಕೊಡುವ ನೀವು ನಿಮ್ಮ ಮಗ ಸತ್ರೆ 1 ಲಕ್ಷ ರೂ. ಪಡೆದು ಸುಮ್ಮನಾಗ್ತೀರಾ ಎಂದು ಪರೋಕ್ಷವಾಗಿ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ರಾಮಚಂದ್ರ ಎಡಕೆ ಪ್ರಶ್ನಿಸಿದ್ದಾರೆ.

ಉಪವಾಸ ಸತ್ಯಾಗ್ರಹ, ಪ್ರತಿಭಟನೆಗಳಿಂದ ಯಾವುದೇ ಪ್ರಯೋಜನವಿಲ್ಲ. ಕೊಲೆಗೆ ಕೊಲೆಯ ಮೂಲಕವೇ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

ಆದರೆ, ಇದನ್ನು ಅಲ್ಲಗಳೆದಿರುವ ರಾಮಚಂದ್ರ ಎಡಕೆ, ನಾನು ಜನರಿಗೆ ಪ್ರಚೋದನೆ ನೀಡಿಲ್ಲ. 16 ಮಂದಿ ಹಿಂದೂ ಮುಖಂಡರ ಹತ್ಯೆಯಾಗಿದ್ದರೂ ಹಂತಕರ ಬಂಧನವಾಗಿಲ್ಲ. ಜನರ ಸಹನೆ, ತಾಳ್ಮೆಯನ್ನು ಸರ್ಕಾರ ಪರೀಕ್ಷಿಸಬಾರದು ಎಂಬ ಅರ್ಥದಲ್ಲಿ ಹೇಳಿದ್ದೇನೆ ಹೊರತು, ಹಿಂಸಾಚಾರಕ್ಕೆ ಪ್ರಚೋದನೆ ನೀಡಿಲ್ಲ. ನಾನು ಹೇಳಿದ್ದರ ಭಾವನೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಆಗಿರಲಿಲ್ಲ. ಹಿಂಸೆ ನಮ್ಮ ಸಂಸ್ಕೃತಿ ಅಲ್ಲ. ನಮ್ಮ ಉದ್ದೇಶವೂ ಅಲ್ಲ. ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...