alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧದಿಂದ ಹೀಗಾಯ್ತು….

ಬೆಳಗಾವಿ: ಅನೈತಿಕ ಸಂಬಂಧ ಬಯಲಾಗುವ ಭಯದಿಂದ ಯುವತಿಯೊಬ್ಬಳು 5 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಘಟನೆ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಹಿರೇಬೆಳ್ಳಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಶಿವಪ್ಪ ಹಾಗೂ ರೇಣುಕಾ ದಂಪತಿಯ 5 ವರ್ಷದ ಪುತ್ರಿ ರಾಜೇಶ್ವರಿ ಕೊಲೆಯಾದ ಬಾಲಕಿ. ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರಿಂದ ರಾಜೇಶ್ವರಿ ಪಕ್ಕದ ಅಜ್ಜಿಯ ಮನೆಯಲ್ಲಿದ್ದಳು.

ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ ಸಂಬಂಧಿಯಾಗಿರುವ ಯುವತಿ, ಪ್ರಿಯಕರನೊಂದಿಗೆ ಇರುವುದನ್ನು ರಾಜೇಶ್ವರಿ ನೋಡಿದ್ದಾಳೆ. ಈ ವಿಚಾರವನ್ನು ಮನೆಯವರಿಗೆ ಹೇಳಬಹುದೆಂಬ ಭಯದಿಂದ ಯುವತಿ, ರಾಜೇಶ್ವರಿಯನ್ನು ಜಮೀನಿಗೆ ಕರೆದೊಯ್ದು ಬೆಂಕಿ ಹಚ್ಚಿ ಪರಾರಿಯಾಗಿದ್ದಾಳೆ.

ಬಾಲಕಿಯ ಚೀರಾಟ ಕೇಳಿ ಓಡಿ ಬಂದ ಜನ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ, ತೀವ್ರ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾಳೆ. ದೊಡವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...