alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಷ ಸೇರ್ಪಡೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ

rajiv-mla

ಬೆಳಗಾವಿ: ಯಾವ ಪಕ್ಷ ಸೇರಬೇಕೆಂದು ಗೊಂದಲದಲ್ಲಿದ್ದ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮತದಾರರಿಗೆ ಆಯ್ಕೆಯ ಅವಕಾಶ ನೀಡಿದ್ದಲ್ಲದೇ, ಅವರ ಅನಿಸಿಕೆಯಂತೆ ಬಿ.ಜೆ.ಪಿ. ಸೇರಲು ಮುಂದಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮೂಲಕ ಸ್ಪರ್ಧಿಸಿ ಜಯಗಳಿಸಿದ್ದ ಅವರು ಯಾವ ಪಕ್ಷ ಸೇರಬೇಕೆಂದು ಮತದಾನ ಮಾಡುವ ಮೂಲಕ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದ್ದರು.

ಹಾರೊಗೇರಿ ಸಮೀಪದ ಆಲಖನೂರ ಗ್ರಾಮದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮತದಾರರ ಅಭಿಪ್ರಾಯದಂತೆ ಬಿ.ಜೆ.ಪಿ. ಸೇರುವುದಾಗಿ ಘೋಷಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಸುಮಾರು 30 ಗ್ರಾಮಗಳ 5000 ಮತದಾರರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ 4392 ಮಂದಿ ಬಿ.ಜೆ.ಪಿ. ಸೇರಲು ಮತ ಹಾಕಿದ್ದಾರೆ. ಹೆಚ್ಚಿನ ಜನರ ಅಭಿಪ್ರಾಯದಂತೆ ರಾಜೀವ್ ಬಿ.ಜೆ.ಪಿ. ಸೇರುವುದಾಗಿ ತಿಳಿಸಿದ್ದಾರೆ.

ಈ ಮೊದಲು ಅವರು ಮತದಾರರ ಅಭಿಪ್ರಾಯ ಕೇಳಿದಾಗ, ಅನೇಕ ಅಭಿಪ್ರಾಯ ವ್ಯಕ್ತವಾಗಿದೆ. ಕೊನೆಗೆ ಮತದಾನದ ಮೂಲಕ ಯಾವ ಪಕ್ಷ ಸೇರಬೇಕೆಂಬುದನ್ನು ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...