alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಕೃತ್ಯಕ್ಕೆ ಬೆಚ್ಚಿಬಿದ್ದ 3 ನೇ ಪತಿ

ಬೆಳಗಾವಿ: ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಮದುವೆಯಾಗಿ ಬಳಿಕ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ಪತಿ ಕೋರ್ಟ್ ಮೊರೆ ಹೋಗಿದ್ದಾನೆ.

ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಗ್ರಾಮವೊಂದರ ಮಹಿಳೆ ಹೀಗೆ ವಂಚಿಸಿದ್ದಾಗಿ ಆರೋಪಿಸಲಾಗಿದೆ. 2012 ರಲ್ಲಿ ಧಾರವಾಡದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಮದುವೆಯಾಗಿದ್ದ ಮಹಿಳೆ ಕೆಲ ವರ್ಷದಲ್ಲೇ ಡೈವೋರ್ಸ್ ನೀಡಿ, ಹಣ, ಆಸ್ತಿ ಪಡೆದುಕೊಂಡಿದ್ದಾಳೆ.

ಬಳಿಕ ದೆಹಲಿಯ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದು, ಕೆಲವೇ ತಿಂಗಳಲ್ಲಿ ಅವರಿಗೂ ಡೈವೋರ್ಸ್ ಕೊಟ್ಟಿದ್ದಾಳೆ. ಬೆಳಗಾವಿಯ ಮಹಾಂತೇಶ ಅವರನ್ನು 2014 ರ ಸೆಪ್ಟಂಬರ್ 12 ರಂದು ಮದುವೆಯಾಗಿದ್ದು, 2 -3 ವರ್ಷದಲ್ಲೇ ಮತ್ತೆ ತನ್ನ ಚಾಳಿ ತೋರಿಸಿದ್ದಾಳೆ.

ಈಕೆಯ ಬಗ್ಗೆ ಅನುಮಾನಗೊಂಡ ಮಹಾಂತೇಶ್ ಮಾಹಿತಿ ಕಲೆ ಹಾಕಿದಾಗ, ತಾನು 3 ನೇ ಪತಿ ಎನ್ನುವುದು ಗೊತ್ತಾಗಿದೆ. ತನ್ನ ಮದುವೆಯ ವಿಷಯ ಮುಚ್ಚಿಟ್ಟು ಪತ್ನಿ ವಂಚಿಸಿದ್ದಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಮಹಿಳೆ ಕೂಡ ತನ್ನ ಪತಿರಾಯನ ವಿರುದ್ಧ ಬೆಳಗಾವಿಯ ಉದ್ಯಮಭಾಗ್ ಠಾಣೆಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...