alex Certify
ಕನ್ನಡ ದುನಿಯಾ       Mobile App
       

Kannada Duniya

ಮಹದಾಯಿ: ಕಣಕುಂಬಿಗೆ ಗೋವಾ ಟೀಂ ಭೇಟಿ

ಬೆಳಗಾವಿ: ಗೋವಾ ಜಲ ಸಂಪನ್ಮೂಲ ಖಾತೆ ಸಚಿವ ವಿನೋದ್ ಪಾಲೇಕರ್ ನೇತೃತ್ವದ ತಂಡ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕುಣಕುಂಬಿಗೆ ಭೇಟಿ ನೀಡಿದೆ.

ಮಹದಾಯಿ ಯೋಜನೆ ಕಾಮಗಾರಿ ಮುಂದುವರೆದಿದೆ ಎಂದು ಗೋವಾ ಮಾಧ್ಯಮಗಳಲ್ಲಿ ಸುದ್ದಿಯಾದ ಹಿನ್ನಲೆಯಲ್ಲಿ ಇಂದು ಸಚಿವರ ನೇತೃತ್ವದ ತಂಡ ಭೇಟಿ ನೀಡಿದೆ.

ಮಹದಾಯಿ ವಿಚಾರ ಟ್ರಿಬ್ಯೂನಲ್ ನಲ್ಲಿದೆ. ಕಾಮಗಾರಿ ನಡೆಸದಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಗೋವಾ ಸರ್ಕಾರ ಕೋರ್ಟ್ ಗೆ ಮನವಿ ಮಾಡಿದೆ.

ಕೋರ್ಟ್ ಆದೇಶ ಉಲ್ಲಂಘಿಸಿ ಕರ್ನಾಟಕ ಸರ್ಕಾರ, ಕಣಕುಂಬಿಯಲ್ಲಿ ಕಳಸಾ –ಬಂಡೂರಿ ನಾಲಾ ಕಾಮಗಾರಿ ನಡೆಸಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಗೋವಾ ತಂಡ ಭೇಟಿ ನೀಡಿದೆ.

ಕಾಮಗಾರಿ ನಡೆಸುವ ಮೂಲಕ ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ವಿನೋದ್ ಪಾಲೇಕರ್ ಆರೋಪಿಸಿದ್ದಾರೆ.

ಮಹದಾಯಿ ವಿಚಾರ ಟ್ರಿಬ್ಯೂನಲ್ ನಲ್ಲಿ ಇತ್ಯರ್ಥವಾಗಬೇಕಿದೆ. ಗೋವಾ ಸಿ.ಎಂ., ಬಿ.ಜೆ.ಪಿ. ಅಧ್ಯಕ್ಷರಿಗೆ ಪತ್ರ ಬರೆದಿರಬಹುದು. ಅದು ಆದೇಶವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...