alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸದ ಸೇರಿ 13 ಮಂದಿ ವಿರುದ್ಧ ಕೇಸ್ ದಾಖಲು

ಬೆಳಗಾವಿ: ನಿಷೇಧದ ನಡುವೆಯೂ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಮಹಾಮೇಳಾವ್ ನಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊಲ್ಹಾಪುರ ಸಂಸದ ಧನಂಜಯ ಮಹಾಡಿಕ್, ಶಾಸಕಿ ಸಂಧ್ಯಾ ಕುಪ್ಪೇಕರ್ ಸೇರಿ ಮಹಾರಾಷ್ಟ್ರದ 13 ಮಂದಿಯ ವಿರುದ್ಧ ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ವಿರೋಧಿಸಿ, ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ್ ಏರ್ಪಡಿಸಿದ್ದು, ಮಹಾರಾಷ್ಟ್ರ ಪ್ರತಿನಿಧಿಗಳು ಭಾಗವಹಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿ ಮಾಡಿದ್ದರು.

ಆದರೂ, ಗಡಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಧನಂಜಯ ಮಹಾಡಿಕ್, ಸಂಧ್ಯಾ ಕುಪ್ಪೇಕರ್, ಜಯಂತರಾವ್ ಪಾಟೀಲ್ ಸೇರಿ ಹಲವರು ಭಾಗವಹಿಸಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...