alex Certify
ಕನ್ನಡ ದುನಿಯಾ       Mobile App
       

Kannada Duniya

ಆಪರೇಷನ್ ಡ್ರೆಸ್ ನಲ್ಲೇ ವೈನ್ ಶಾಪ್ ಗೆ ಹೋದ ರೋಗಿ

belgavi-rogid

ಬೆಳಗಾವಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಆಪರೇಷನ್ ಡ್ರೆಸ್ ನಲ್ಲಿಯೇ ಮದ್ಯದ ಅಂಗಡಿಯನ್ನು ಹುಡುಕಿಕೊಂಡು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯೊಬ್ಬನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ತಲೆ, ಎದೆಗೆ ಗಂಭೀರವಾದ ಗಾಯಗಳಾಗಿದ್ದ ಆತನಿಗೆ 2 ದಿನಗಳಿಂದ ಚಿಕಿತ್ಸೆ ನೀಡಲಾಗಿದೆ.

ಪ್ರಜ್ಞೆ ಬಂದ ಕೂಡಲೇ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆ ಡ್ರೆಸ್ ನಲ್ಲಿಯೇ ಆತ ನಡೆದುಕೊಂಡು ಹೋಗಿದ್ದು, ದಾರಿಯಲ್ಲಿ ಸಿಕ್ಕವರಿಗೆ ಮದ್ಯದ ಅಂಗಡಿ ಎಲ್ಲಿದೆ ಎಂದು ಕೇಳಿದ್ದಾನೆ.

ಚಿಕಿತ್ಸೆ ಪಡೆಯುತ್ತಿದ್ದ ರೋಗಿ ನಾಪತ್ತೆಯಾಗಿರುವ ಕುರಿತಾಗಿ ಜಿಲ್ಲಾಸ್ಪತ್ರೆ ಅಧಿಕಾರಿಗಳು ಎ.ಪಿ.ಎಂ.ಸಿ. ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...