alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಗುಡಿಯಲ್ಲೇ ಹಾರಿತು ಗುಂಡು…!

belagvai-d

ಬೆಳಗಾವಿ: ಉದ್ಯಮಿಯೊಬ್ಬರು ದೇವಾಲಯದ ಗರ್ಭಗುಡಿಯಲ್ಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಶಿವನಗೌಡ ಪಾಟೀಲ(45) ಆತ್ಮಹತ್ಯೆ ಮಾಡಿಕೊಂಡವರು. ಬೈಲಹೊಂಗಲ ತಾಲ್ಲೂಕಿನ ತರಕರ ಶೀಗೇಹಳ್ಳಿಯ ಗಿರಿಮಲ್ಲೇಶ್ವರ ದೇವಾಲಯದಲ್ಲಿ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗುಂಡು ಹಾರಿದ ಶಬ್ಧ ಕೇಳಿದ ಗ್ರಾಮಸ್ಥರು ಬಂದು ನೋಡಿದಾಗ, ಶಿವನಗೌಡ ಪಾಟೀಲ್ ಸಾವನ್ನಪ್ಪಿರುವುದು ಕಂಡು ಬಂದಿದೆ.

ಸುದ್ದಿ ತಿಳಿದ ಜನ ದೇವಾಲಯದ ಬಳಿ ಜಮಾಯಿಸಿದ್ದು, ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...