alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಗಾವಿಯಲ್ಲಿ ದಿಕ್ಕಾಪಾಲಾಗಿ ಓಡಿದ ‘ಪದ್ಮಾವತ್’ ವೀಕ್ಷಕರು

ಬೆಳಗಾವಿ: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’ ತೀವ್ರ ವಿರೋಧದ ನಡುವೆಯೂ ದೇಶದ ಬಹುತೇಕ ಕಡೆಗಳಲ್ಲಿ ಬಿಡುಗಡೆಯಾಗಿದೆ.

ಬೆಳಗಾವಿಯ ಪ್ರಕಾಶ್ ಥಿಯೇಟರ್ ನಲ್ಲಿಯೂ ‘ಪದ್ಮಾವತ್’ ತೆರೆ ಕಂಡಿದ್ದು, ಚಿತ್ರ ವೀಕ್ಷಿಸಿ ಬರುತ್ತಿದ್ದ ಪ್ರೇಕ್ಷಕರ ಮೇಲೆ ಕಿಡಿಗೇಡಿಗಳು ಸೀಮೆಎಣ್ಣೆ ಬಾಟಲಿ ಎಸೆದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.

ಸಿನಿಮಾ ವೀಕ್ಷಿಸಿ ಬರುವಾಗ ದುಷ್ಕರ್ಮಿಗಳು ಬಾಟಲಿ ಎಸೆದಿದ್ದರಿಂದ ಬೆಂಕಿ ತಗುಲಿದೆ. ಪ್ರೇಕ್ಷಕರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಇದು ಪೆಟ್ರೋಲ್ ಬಾಂಬ್ ಇರಬಹುದೆಂದು ಮೊದಲಿಗೆ ಹೇಳಲಾಗಿತ್ತಾದರೂ, ಪೊಲೀಸರ ತನಿಖೆಯ ಬಳಿಕ ಸೀಮೆಎಣ್ಣೆ ಬಾಟಲಿ ಎಂಬುದು ಗೊತ್ತಾಗಿದೆ.

ತಕ್ಷಣವೇ ಬೆಂಕಿಯನ್ನು ನಂದಿಸಲಾಗಿದೆ. ಖಡೇಬಜಾರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆಕಸ್ಮಾತ್ ಬೆಂಕಿ ವ್ಯಾಪಿಸಿದ್ದರೆ, ಅನಾಹುತವಾಗುವ ಸಾಧ್ಯತೆ ಇತ್ತು. ತಕ್ಷಣವೇ ಬೆಂಕಿಯನ್ನು ನಂದಿಸಿದ್ದರಿಂದ ಅನಾಹುತ ತಪ್ಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...