alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಚಾಲನೆ ಮಾಡುವಾಗಲೇ ಹೃದಯಾಘಾತ

driver-belagavi

ಬೆಳಗಾವಿ: ಕಳೆದ ಎರಡು ದಿನಗಳಿಂದ ಎದೆನೋವಿಗೆ ಚಿಕಿತ್ಸೆ ಪಡೆಯಲು ರಜೆ ಕೇಳಿದರೂ, ಡಿಪೋ ಮ್ಯಾನೇಜರ್ ರಜೆ ಕೊಟ್ಟಿರಲಿಲ್ಲ. ಇದರ ಪರಿಣಾಮ ಕರ್ತವ್ಯನಿರತರಾಗಿದ್ದಾಗಲೇ ಬಸ್ ಚಾಲಕ ಮೃತಪಟ್ಟಿದ್ದಾರೆ.

ಬೆಳಗಾವಿ ನಗರ ಸಾರಿಗೆ ಬಸ್ ಚಾಲಕ ಕಾಗಜಿ ಸಾವು ಕಂಡವರು. ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರು ರಜೆ ಕೇಳಿದ್ದರೂ, ಡಿಪೋ ಮ್ಯಾನೇಜರ್ ಕೊಟ್ಟಿರಲಿಲ್ಲ ಎನ್ನಲಾಗಿದೆ.

ಇಂದು ಎಂದಿನಂತೆ ಕೆಲಸಕ್ಕೆ ಹಾಜರಾದ ಕಾಗಜಿ ಸಂತೆ ಬಸ್ತಿವಾಡದಿಂದ ಬೆಳಗಾವಿಗೆ ಬರುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದು, ನಿರ್ವಾಹಕ ಬಸ್ ಚಾಲನೆ ಮಾಡಿಕೊಂಡು ಬಂದಿದ್ದಾರೆ.

ಸುದ್ದಿ ತಿಳಿದ ನಗರ ಸಾರಿಗೆ ಬಸ್ ಚಾಲಕರು ಮತ್ತು ನಿರ್ವಾಹಕರು ಡಿಪೋದಿಂದ ಬಸ್ ಗಳನ್ನು ತೆಗೆಯದೇ ಪ್ರತಿಭಟನೆ ನಡೆಸಿದ್ದಾರೆ.

ಸೂಕ್ತ ಸಮಯಕ್ಕೆ ರಜೆ ನೀಡಿದ್ದರೆ, ಕಾಗಜಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ರಜೆ ನೀಡದೇ ಅವರ ಸಾವಿಗೆ ಕಾರಣವಾದ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಸ್ ಚಾಲಕರು ಮತ್ತು ನಿರ್ವಾಹಕರ ಪ್ರತಿಭಟನೆಯಿಂದಾಗಿ ಬೆಳಗಾವಿಯಲ್ಲಿ ನಗರ ಸಾರಿಗೆ ಸಂಚಾರ ಸ್ಥಗಿತವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...